ಕೋಚಿಂಗ್ ಹೋಗದೆ ಯುಪಿಎಸ್ಸಿ ಪರೀಕ್ಷೆ ತೆರ್ಗಡೆಯಾದ ಹುಬ್ಬಳ್ಳಿಯ ಕೃಪಾ ಜೈನ್…
ಹುಬ್ಬಳ್ಳಿ:ಕಳೆದ ವಾರ ಹುಬ್ಬಳ್ಳಿ ವಿದ್ಯಾಶ್ರೀ ಅವರು ದ್ವಿತಿಯ ಪರೀಕ್ಷೇಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ಹುಬ್ಬಳ್ಳಿ ಕೃಪಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 440 ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿ ಕಿರ್ತಿ ಹೆಚ್ಚಿಸಿದ್ದಾರೆ..
ಯುಪಿಎಸ್ ಸಿ ಪರೀಕ್ಷೇಯಲ್ಲಿ ಹುಬ್ಬಳ್ಳಿಯ ಕೃಪಾ ಜೈನ್ 440ನೇ ರಾಂಕ್ ಪಡೆದಿದ್ದಾರೆ.
ವ್ಯಾಪಾರಸ್ಥರಾದ ವಾಭಯ ಪಾರ್ಲೆಚಾ ಅವರ ಪುತ್ರಿ ಕೃಪಾ ಜೈನ್ ಹುಬ್ಬಳ್ಳಿಯ ಡಿ.ಕೆ.ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್ ಸಿ, ಪ್ರೇರಣಾ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿ, ಇಂಜಿನಿಯರಿಂಗ್ ವ್ಯಾಸಂಗವನ್ನು ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ.
ಕೋಚಿಂಗ್ ಗೆ ಹೋಗದೆ ಮೂರನೇ ಯತ್ನದಲ್ಲೇ ಯುಪಿಎಸ್ ಸಿನಲ್ಲಿ440ನೇ ರಾಂಕ್ ಪಡೆದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಯುಪಿಎಸ್ ಸಿ ಪರೀಕ್ಷೆ ಗೆ ಮುಂದಾಗುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸೂಕ್ತ ಮಾಹಿತಿ, ಮಾರ್ಗ ದರ್ಶನ, ತರಬೇತಿ ಸೌಲಭ್ಯ ದೊರೆಯಬೇಕಾಗಿದೆ ಎಂದು ಕೃಪಾ ಜೈನ್ ಅಭಿಪ್ರಾಯ ಪಟ್ಟರು.
ಇವರ ತಂದೆ ಮಾತನಾಡಿ ಮಗಳ ಸಾಧನೆ ದೇಶಕ್ಕೆ ಹೆಮ್ಮೆ ಪಡುವಂತಹದ್ದು, ನಮಗೆ ಬಹಳ ಸಂತೋಷವಾಗಿದೆ ಎಂದರು..ಮುಂದೆ ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂದರು…