ಮತ್ತೆ ಹಳ್ಳ ಹಿಡಿದ ಕಡ್ಡಾಯ ವಗಾ೯ವಣೆ
10 ವಷ೯ ಪೂರೈಸಿದ ಶಹರ ಶಿಕ್ಷಕರ ಕಡ್ಡಾಯ ವಗಾ೯ವಣೆಗೆ ಇದ್ಯಾವ ನ್ಯಾಯರಿ …..
ಬೇರೆಯವರಿಗಿಲ್ಲದ ನ್ಯಾಯ ಇವರಿಗೇಕೆ ತಿಳಿಯುತ್ತಿಲ್ಲ ….
ನೋಡ್ರಿ ಈ ಮೇಲಿನ ವಿಷಯ ಓದ್ರಿ . ಶಹರ ಶಿಕ್ಷಕರನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಸತತ ಪ್ರಯತ್ನ ಹೇಗಿದೆ ಎಂದು …..
ಕೊನೆಯ ದಿನಾಂಕ : 14/04/2024 ಆಗಿತ್ತು ಮತ್ತೆ 15 ಕೇಳ್ಕೊಂಡ್ರು …
ಈಗ ಮತ್ತೆ 17 ರವರೆಗೆ ಕೇಳಿಕೊಂಡಿದ್ದು ನ್ಯಾಯವೇನ್ರಿ….
ಪದೆ ಪದೆ ದಿನಾಂಕ ವಿಸ್ತರಿಸುತ್ತಿರುವುದು ನ್ಯಾಯವೇ ….
ಬೇರೆ ಶಿಕ್ಷಕರಿಗೆ ತೊಂದರೆ ಆದಾಗ ಒಂದ ಗಂಟೆ ಕೂಡಾ ಅವಕಾಶ ಕೊಡಲ್ಲ ….
ಇದು ಆನ್ ಲೈನ್ ಅಪ್ಲೋಡ್ ಮಾಡಬೇಕು. ಇದರಲ್ಲೂ ಸಹಿತ ಈ ರೀತಿಯ ಕೆಲಸಕ್ಕೆ ಏನು ಮಾಡೋದು. ಅಧಿಕಾರಿಗಳಿಗೆ ಯಾರೂ ಹೇಳೋರು , ಕೇಳೋರೆ ಇಲ್ವಾ ….
ಸಂಘಟನೆಗಳು ಸತ್ತು ಹೋಗಿದ್ದಾವೆಯೇ . ಇನ್ನೊಬ್ಬರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲವೇ. ಇಲ್ಲಿ ಏನೋ ದೊಡ್ಡ ವಾಸನೆ ಹೊಡೆಯುತ್ತಿದೆ. ಒಟ್ಟಾರೆ ಕಡ್ಡಾಯ ವಗಾ೯ವಣೆಯನ್ನು ಸಂಪೂಣ೯ ಹಳ್ಳ ಹಿಡಿಸುವ ಲೆಕ್ಕಾಚಾರ …..
ಆತ್ಮೀಯರೆ ಇದಕ್ಕೆ ಯಾರಾದರೂ ಸರಿಯಾಗಿ ಉತ್ತರ ಅಥವಾ ಮಾಗ೯ದಶ೯ನ ನೀಡುವಿರಾ.…
ಸಮಯ ಕೇಳುವುದು ತಪ್ಪಲ್ಲ . ಆದೇಶವಾಗಿ ಎಷ್ಟೋ ದಿನಗಳಾಗಿವೆ ದಿನಾಂಕ ನಿಗದಿಯಾಗಿದೆ ಆದರೂ ಶಹರ ಶಿಕ್ಷಕರ ಪರ ಕಾಳಜಿ ಯಾಕೋ ಅತೀಯಾಯಿತು….
14/04/2024 ಕೊನೆಯ ದಿನಾಂಕವೇ ಅಂತಿಮವಾಗಬೇಕು. ಇದೇ ನಮ್ಮ ಗುರಿಯಾಗಬೇಕು ಏನಂತಿರಿ ಗುರುಗಳೇ …..
ಯಾಕ್ರಿ ಇದೆಲ್ಲಾ ಮಾಡತೀರಿ , ನಾವೂ ಮನುಷ್ಯರಲ್ಲವೇ…
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಅವರು ಪಬ್ಲಿಕ್ ಟುಡೆ ಯೊಂದಿಗೆ ಮಾತನಾಡ, ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ..ಮಾರ್ಗಸೂಚಿ ವೇಳಾಪಟ್ಟಿ ಪ್ರಕಾರ ನಡೆಯಲೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ..