ಶಿಕ್ಷಣ ಇಲಾಖೆಯ ಇಂದಿನ ವ್ಯವಸ್ಥೆಗೆ ಯಾರು ಕಾರಣ ಅಂತ ಸ್ವತಃ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೆ ಹೇಳಿದ್ರು ನೋಡಿ…
ದಸರಾ ರಜೆ ವಿಸ್ತರಣೆ ಆಗುತ್ತದೆಯೋ?ಇಲ್ಲವೋ? ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ..
ಹುಬ್ಬಳ್ಳಿ: ಪ್ರತಿ ವರ್ಷ ದಸರಾ ರಜೆಯನ್ನು ಅಕ್ಕೋಬರ್ 31 ರವರೆಗೆ ನೀಡುವುದು ವಾಡಿಕೆ. ಅದ್ರೆ ಕಳೆದ ಎರಡು ವರ್ಷದಿಂದ ದಸರಾ ರಜೆ ಅವಧಿಯನ್ನು ಕಡಿತಗೊಳಿಸಲಾಗಿದೆ..
ಶಿಕ್ಷಣ ಇಲಾಖೆಯ ಜ್ಞಾನ ಇಲ್ಲದೇ ಇರುವ ಅಧಿಕಾರಿಗಳಿಂದ ಇವತ್ತು ಶಿಕ್ಷಣ ದಾರಿ ತಪ್ಪುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರು ಹೇಳಿದರು.. ತಮ್ಮ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು,, ನಾನು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ, ಮತ್ತೊಮ್ಮೆ ಪತ್ರ ಬರೆಯುವುದಾಗಿ ತಿಳಿಸಿದ್ರು.. ಇದೇ ವೇಳೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶಕುಮಾರಸಿಂಗ್ ಅವರಿಗೆ ಪೋನ್ ಕರೆ ಮಾಡಿ ಮಾತನಾಡಿದ ಅವರು, ದಸರಾ ರಜೆ ವಿಸ್ತರಣೆ ಮಾಡುವಂತೆ ಹೇಳಿದ್ರು, ಹಾಗೂ 24 ಕ್ಕೆ ಹಬ್ಬ ಮುಗಿಯುತ್ತದೆ, 25 ಕ್ಕೆ ಮಕ್ಕಳು ಶಾಲೆಗೆ ಬರುವುದಿಲ್ಲ..ಆದ್ದರಿಂದ ದಸರಾ ರಜೆಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಣೆ ಮಾಡುವಂತೆ ಹೇಳಿದ್ರು…ಕೇವಲ ಕಾಟಾಚಾರಕ್ಕೆ ಮಾತ್ರ ಶಾಲೆಗಳನ್ನು ಆರಂಭಮಾಡಿದಂತೆ ಆಗುತ್ತದೆ ಎಂದರು.ಆದ್ರೆ ಅಧಿಕಾರಿಗಳು ಮಾತ್ರ ಆಯತು ಸರ್ ಅಂತ ಹೇಳಿದ್ರು..
ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಶಾಲಾ ಆಡಳಿತದ ಜವಾಬ್ದಾರಿ ಯನ್ನು ಆರ್ಡಿಪಿಆರ್ ವಹಿಸಿತ್ತಿರಿಮುವ ಕ್ರಮಕ್ಕೆ ಆಕ್ಷೇಪಣೆ ಸಲ್ಲಿಸಿ ಮನವಿ ನಿಡಿದ್ರು..

ನಂತರ ಮಾದ್ಯಮವರೊಂದಿಗೆ ಮಾತನಾಡಿದ ಹೊರಟ್ಟಿಯವರು ಇದೆ ತಿಂಗಳು 31 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ, ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು..
ಮಾನ್ಯ ಬಸವರಾಜ ಹೊರಟ್ಟಿಯವರಿಗೆ ಕಳೆದ ವರ್ಷ ಕೂಡ ಶಿಕ್ಷಕರು ದಸರಾ ರಜೆ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದರು.ಅವಾಗಲೂ ಸಹ ಹೊರಟ್ಟಿಯವರು ಅಧಿಕಾರಿಗಳ ಜೊತೆ ಮಾನತಾಡಿ ದಸರಾ ರಜೆ ವಿಸ್ತರಣೆ ಮಾಡುವಂತೆ ಹೇಳಿದ್ದರು,ಈ ವರ್ಷವೂ ಕೂಡ ಅದನ್ನೆ ಮಾಡಿದ್ದಾರೆ…
ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಜನ ಪ್ರತಿನಿಧಿಗಳು ಮಾತ್ರ ದಸರಾ ರಜೆ ವಿಸ್ತರಿಸುವಲ್ಲಿ ವಿಫಲವಾಗಿದ್ದಾರೆ…
ಸದ್ಯಕ್ಕೆ ದಸರಾ ರಜೆ ವಿಸ್ತರಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಕ್ಟೋಬರ್25 ರಿಂದಲೇ ಶಾಲೆಗಳು ಆರಂಭವಾಗಲಿವೆ..ಯಾವುದೇ ಪಕ್ಷ ಅಧಿಕಾರಕ್ಕೆ ಇದ್ದರೂ ಕೂಡ ಶಿಕ್ಷಕರ ಈ ಸಮಸ್ಯೆ ಗೆ ಪರಿಹಾರ ಇಲ್ಲದಂತಾಗಿದೆ..
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ರಾಜ್ಯ ಘಟಕ ಹುಬ್ಬಳ್ಳಿ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಅಶೋಕ.ಸಜ್ಜನ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಶಿಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ ಸಲಹಾ ಸಮಿತಿ ಅಧ್ಯಕ್ಷ ಗೋವಿಂದ ಜುಜಾರೆ ರಾಜ್ಯ ಉಪಾಧ್ಯಕ್ಷ ಅಶೋಕ.ಜಿ.ಬಿಸೇರೊಟ್ಟಿ.ಜಿಲ್ಲಾ ಉಪಾಧ್ಯಕ್ಷ ಆನಂದ ದುಂದೂರ.ಎ.ಆಯ್.ಮುಳಗುಂದ ಜಿಲ್ಲಾ ಪ್ರ.ಕಾ.ಮರಿಗೌಡ ಭೂಮನಗೌಡ್ರ.