ಇತ್ತೀಚಿಗೆ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾರ್ಥಿನಿಯಾದ ಪ್ರೀತಿ ಸಿದ್ದು ಕಲ್ಲೂರ 559 ಅಂಕಗಳನ್ನು ಅಂದರೆ ಶೇಕಡಾ 90% ಅಂಕಗಳನ್ನು ಪಡೆದು ತಾನು ಓದುತ್ತಿದ್ದ ಹಿರೇಮಸಳಿ ಗ್ರಾಮದ ಶಾಂತೇಶ್ವರ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.ಅದೇ ರೀತಿ ಹಿರೇಮಸಳಿ ಇನ್ನೊರ್ವ ವಿದ್ಯಾರ್ಥಿನಿಯಾದ ಸಾಕ್ಷಿ ಸೋಮಶೇಖರ ಪಟ್ಟಣಶೆಟ್ಟಿಯು 591 ಅಂಕಗಳನ್ನು ಅಂದರೆ ಶೇಕಡಾ 94% ಅಂಕಗಳನ್ನು ಪಡೆದು ತಾನು ಓದುತ್ತಿದ್ದ ಗೊಳಸಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.ಅತ್ಯುತ್ತಮವಾದ ಸಾಧನೆಯನ್ನು ಮಾಡಿ ಶಾಲೆಯ, ಶಿಕ್ಷಕರ,ತಂದೆತಾಯಿಗಳ ಹಾಗೂ ಹಿರೇಮಸಳಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿರುವ ಇರ್ವರು ವಿದ್ಯಾರ್ಥಿನಿಯರನ್ನು ಹಿರೇಮಸಳಿ ಗ್ರಾಮದ ಎಮ್ ಪಿ ಎಸ್ ಶಾಲೆಯ ಎಸ್ ಡಿ ಎಮ್ ಸಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು, ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರೆಲ್ಲರೂ ಸೇರಿ ಅಭಿಮಾನಪೂರ್ವಕವಾಗಿ ಸನ್ಮಾನಿಸಿದರು.