ವೀಣಾ ಟೀಚರ್
ಶಿಕ್ಷಣ ಕೀರ್ತಿಯಾಗಿ
ಬೆಳಗುತ್ತಿರುವ ವೀಣಾ ಟೀಚರ್
ಕೂಲಿ ಕಾರ್ಮಿಕರ ಮಕ್ಕಳ
ಪಾಲಿಗೆ ಶಿಕ್ಷಣ ನೀಡುವ ನೀ
ಅವರ ಪಾಲಿನ ನಂದಾದೀಪ
ತಂದೆ ತಾಯಿ ಚಿಂತೆ ಬೇಡ ನಿಮಗೆ
ನಾನಿರುವೆ ನಿಮ್ಮ ಜೊತೆಗೆ
ಕಣ್ಣ ರೆಪ್ಪೆಯಂತೆ ಕಾಯುವೆನು ನಾನು
ನೀವು ಬೆಳೆಯಬೇಕು ಜಗದೊಳು
ಹಬ್ಬಬೇಕು ನಿಮ್ಮಯ ಕೀರ್ತಿ
ಅಮರವಾಗಲಿ ನಿಮ್ಮ ಹೆಸರು
ಶಿಕ್ಷಣದ ಕೀರ್ತಿ ನೀವು
ಜ್ಞಾನವಂತರಾಗಿ ಬಾಳಿರಿ
ಹೆತ್ತವರ ಪಾಲಿನ ಪ್ರೀತಿಗೆ ಪಾತ್ರರಾಗಿ ಬಾಳಿ ನೀವೆಲ್ಲರೂ
ಕರುಣೆಯ ಬೆಳಕಾಗಿ ನೀವು
ಸಾಂತ್ವನಕೆ ಹೆಸರಾಗಿರಿ
ಕರುಣಾಮೂರ್ತಿ ವೀಣಾ ಟೀಚರ್
ನಿಮ್ಮಯ ಪಾಲಿನ ಬೆಳಕು
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
9449518400