ತಾಲೂಕು ದಂಡಾಧಿಕಾರಿಗಳಾದ ಎಂ.ಎನ್.ಹೆಗ್ಗನ್ನವರ ಅವರಿಗೆ ಶಿಕ್ಷಕರಿಂದ ಗೌರವ ಸನ್ಮಾನ.
ಸವದತ್ತಿಃ ಸವದತ್ತಿ ತಾಲೂಕಿನ ತಾಲೂಕು ದಂಡಾಧಿಕಾರಿಗಳಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಗೌರವ ಸನ್ಮಾನಗೈಯುವ ಮೂಲಕ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸವದತ್ತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಸುಧೀರ್ ವಾಗೇರಿ. ಶಿಕ್ಷಣ ಸಂಯೋಜಕರಾದ ಶ್ರೀ ಗುರುನಾಥ್ ಕರಾಳೆ. ಪ್ರೌಢಶಾಲಾ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಮಂಜುನಾಥ್ ಕಮ್ಮಾರ್ ಭಂಡಾರ ಹಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಾಶಪ್ಪನವರ.
ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ವಿನಾಯಕ್ ಕುರುಬಗಟ್ಟಿ ಬಿಐ.ಇ.ಆರ್.ಟಿ ಗಳಾದ ವೈ.ಬಿ.ಕಡಕೋಳ.ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ.ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ .ಬಿ.ಆರ್.ಪಿ ವ್ಹಿ.ಸಿ.ಹಿರೇಮಠ.ರತ್ನಾ ಸೇತಸನದಿ.ಶಬ್ಬೀರ್ ಮುನವಳ್ಳಿ. ಅಕೌಂಟಂಟ್ ಜಿ. ಎಸ್. ಸಿದ್ಲಿಂಗನವರ. ಶಿಕ್ಷಕರಾದ ಸುರೇಶ ಕರಿಗಾರ.ಪಿ.ಎಸ್.ಶಿಂಧೆ.ಮೊದಲಾದವರು ಉಪಸ್ಥಿತರಿದ್ದರು