ಯುವ ಕವಿ ಶ್ರೀ ಮುತ್ತು ವಡ್ಡರ ಕರುನಾಡ ಕವಿ ಪ್ರಶಸ್ತಿಗೆ ಆಯ್ಕೆ…
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರು ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ
ಕೊಂಡು ಹಲವಾರು ರೀತಿಯ ಕವನಗಳನ್ನು, ಪ್ರತಿನಿತ್ಯ ಪತ್ರಿಕೆಗಳಿಗೆ ವಿಶೇಷ ರೀತಿಯ ಲೇಖನಗಳನ್ನು ಬರೆಯುತ್ತಿದ್ದು,ಇವರ ಅಲ್ಪ ಪ್ರತಿಭೆ ಹಾಗೂ ಇವರು ಬರೆದ ಕವನಗಳನ್ನು ಪರಿಗಣಿಸಿ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಹಲವು ಕವನಗಳನ್ನು ವ್ಯಕ್ತಪಡಿಸಿದ್ದಾರೆ.ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಮ್ಮ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯು ದಿನಾಂಕ:-01-07-23ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆಯಲಿರುವ “ಕರುನಾಡ ಅಕ್ಷರ ಜಾತ್ರೆ”ಯಲಿ ಕರುನಾಡ ಕವಿ ಪುರಸ್ಕಾರ ನೀಡಲು ಆಯ್ಕೆ ಮಾಡಲಾಗಿದೆ ಎಂದು ಜಗದೀಶ.ಎಸ್. ಕಾಬನೆ ಅದ್ಯಕ್ಷರು ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಇವರು ಕವಿವಾಣಿ ಸಾಹಿತ್ಯ ಪರಿಷತ್ತು ವೇದಿಕೆಯ ಸಂಚಾಲಕರಾಗಿ, ಕರುನಾಡು ಹಣತೆ ಕವಿ ಬಳಗ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸಿದ್ದಗಂಗಾ ಸಾಹಿತ್ಯ ವೇದಿಕೆ, ಬೆಂಗಳೂರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸಾಹಿತ್ಯ ಸೇವೆಯು ಈಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇವೆ….