ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಸಾವು!!
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಈ ಶಿಕ್ಷಕನಿಗೆ ಅದೇನಾಗಿತ್ತೋ ಗೊತ್ತಿಲ್ಲ. ಆದರೆ, ದೀರ್ಘ ಕಾಲದಿಂದ ಕಾಡುತ್ತಿದ್ದ ಹೊಟ್ಟೆ ನೋವು ತಾಳಲಾರದೆ ಅವರು ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ ಶಿಕ್ಷಕರಾಗಿರುವ ಕೃಷ್ಣ ನಾಯ್ಕ್ (42) ಅವರು ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೃಷ್ಣ ನಾಯ್ಕ್ ಅವರು ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಾಲ್ಕು ದಿನದ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೃಷ್ಣ ನಾಯ್ಕ್ ಅವರು ಬಳಿಕ ಮನೆಗೆ ಬಂದಿದ್ದರು.
ಗುರುವಾರ ಮುಂಜಾನೆ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರಿಗೆ ಹೆದ್ದಾರಿ ಪಕ್ಕದ ಹೊಂಡದ ನೀರಿನಲ್ಲಿ ಕೃಷ್ಣನಾಯ್ಕ್ ಮೃತದೇಹ ಕಂಡಿತು. ಕೂಡಲೇ ಸಾರ್ವಜನಿಕರು ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.