ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒಳ ಜಗಳ ಬೀದಿಗೆ ಬಿದ್ದಿದೆ..
ಜಿಲ್ಲಾಧ್ಯಕ್ಷರುಗಳು,ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಸಮಸ್ತ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರುಗಳೇ
Date: 15-06-2023
ಮಾನ್ಯರೇ,
ಶ್ರೀ ಶಂಭುಲಿಂಗನಗೌಡ ಪಾಟೀಲ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ಆದ ನಾನು ರಾಜ್ಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ, 2020-2025ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತೇನೆ. ಬೈಲಾ ನಿಯಮ 6 (ಆರ್) ರಲ್ಲಿ ತಿಳಿಸಿರುವಂತೆ ನಾನು ರಾಜ್ಯ ಸಂಘದ ರಾಜ್ಯಾಧ್ಯಕ್ಷ ಹುದ್ದೆಗೆ, ರಾಜೀನಾಮೆಯನ್ನು ಸಲ್ಲಿಸಿರುವುದಿಲ್ಲ ಹಾಗೂ ನಿವೃತ್ತಿ/ಮುಂಬಡ್ತಿಯನ್ನು ಸಹ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಹುದ್ದೆ ತೆರವಾಗದೇ ಇರುವುದರಿಂದ ರಾಜ್ಯಾಧ್ಯಕ್ಷರ ಹುದ್ದೆಗೆ ಬೇರೊಬ್ಬರನ್ನು ಆಯ್ಕೆ ಮಾಡಲು ಬೈಲಾ ನಿಯಮದಲ್ಲಿ ಅವಕಾಶವಿರುವುದಿಲ್ಲ.
ಬೈಲಾ ನಿಯಮದನ್ವಯ ರಾಜ್ಯಾಧ್ಯಕ್ಷರೊಂದಿಗೆ ಸಮಾಲೋಚಿಸಿ, ರಾಜ್ಯಾಧ್ಯಕ್ಷರ ಅನುಮತಿ ಪಡೆದ ನಂತರ ರಾಜ್ಯ ಕಾರ್ಯಕಾರಿ ಸಭೆ ಏರ್ಪಡಿಸಬೇಕಾಗಿದ್ದು, ಆದರೆ ರಾಜ್ಯ ಕಾರ್ಯಕಾರಿ ಸಭೆ ನಡೆಸುವ ಬಗ್ಗೆ ರಾಜ್ಯಾಧ್ಯಕ್ಷನಾದ ನನ್ನ ಜೊತೆಯಲ್ಲಿ ಪ್ರಧಾನ ಕಾರ್ಯದರ್ಶಿಯವರು ಯಾವುದೇ ರೀತಿಯ ಸಮಾಲೋಚನೆ ನಡೆಸಿರುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಸುಳ್ಳು ದಾಖಲೆಗಳನ್ನು ಗಮನಿಸಿದಾಗ ಸಂಘದ ಪ್ರಮುಖ ದಾಖಲೆ ನಡವಳಿ ಪುಸ್ತಕವನ್ನು ದುರುಪಯೋಗಪಡಿಸಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಕೆಲವು ವ್ಯಕ್ತಿಗಳು ಸಂಘವು ಹಣಕಾಸು ವಹಿವಾಟು ನಡೆಸುತ್ತಿರುವ ಬ್ಯಾಂಕ್ಗೆ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲರವರು ವಯೋನಿವೃತ್ತಿ ಹೊಂದಿರುವುದಾಗಿ ಸುಳ್ಳು ಮಾಹಿತಿ ನೀಡಿ, ಸಂಘದ ಬ್ಯಾಂಕ್ ಉಳಿತಾಯ ಖಾತೆಯ ಹೆಸರನ್ನು ಬದಲಾಯಿಸಲು ವಿಫಲ ಪ್ರಯತ್ನ ನಡೆಸಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ರವರಿಗೆ ಸಂಘದ ಬೈಲಾ ನಿಯಮಗಳ ಬಗ್ಗೆ ಮಾಹಿತಿ ನೀಡಿದ ನಂತರ ಬ್ಯಾಂಕ್ನವರು ಕಾನೂನು ಸಲಹೆ ಪಡೆದು ನ್ಯಾಯಲಯದಿಂದ ಅಂತಿಮ ಆದೇಶ ಬರುವವರೆಗೂ ಸಂಘದ ಬ್ಯಾಂಕ್ ಖಾತೆಯವ್ಯವಹಾರವನ್ನು ದುರುಪಯೋಗವಾಗದಂತೆ ಸ್ಥಗಿತಗೊಳಿಸಿರುತ್ತಾರೆ.
ಮುಂದುವರೆದು, ಖಾಲಿ ಹಾಳೆಯ ಮೇಲೆ ಕೆಲವು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಸಹಿ ಪಡೆದು, ಅಂತಹ ಸಹಿಗಳನ್ನು ನನ್ನ ವಿರುದ್ಧ ದಿನಾಂಕ:20-02-2023ರಂದು ದೂರು ದಾಖಲಿಸಲು ಬಳಸಿಕೊಂಡಿರುತ್ತಾರೆ ಹಾಗೂ ನಿಮ್ಮ ಸಹಿಗಳನ್ನು ದುರುಪಯೋಗಪಡಿಸಿಕೊಂಡು ದಿನಾಂಕ:6-5-2023 ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿರುತ್ತೇವೆಂದು ಮತ್ತು ನನ್ನ ಮೇಲೆ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿದೆಯೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಲಯಕ್ಕೆ ಸಲ್ಲಿಸಿರುತ್ತಾರೆ.
ಮೇಲ್ಕಂಡ ಎಲ್ಲಾ ಅಂಶಗಳೊಂದಿಗೆ ಶಂಭುಲಿಂಗನಗೌಡ ಪಾಟೀಲ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ಆದ ನಾನು ಸಿಟಿ ಸಿವಿಲ್ ಬೆಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹಂತದಲ್ಲಿರುವುದರಿಂದ, ಇಂತಹ ಸಂದರ್ಭದಲ್ಲಿ ಹೂಡಿದ್ದು, ಪ್ರಕರಣವು ವಿಚಾರಣೆ
ರಾಜ್ಯ ಕಾರ್ಯಕಾರಿಣಿ ಸಭೆ ಕರೆಯುವುದು.
ಸಭೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸುವುದು.
ವಿಷಯಸೂಚಿಯಲ್ಲಿ ನ್ಯಾಯಾಲಯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿರುವುದು.
ಕಾನೂನು ವಿರುದ್ಧವಾಗಿ ಬ್ಯಾಂಕ್ ಖಾತೆ ವಹಿವಾಟು ನಡೆಸಲು ಪ್ರಯತ್ನಿಸುವುದು.
ಸಭಾ ನಡವಳಿ ಪುಸ್ತಕದಲ್ಲಿ ಸಹಿ ಮಾಡುವಂತೆ ಒತ್ತಾಯಿಸುವುದು.
ಮೇಲ್ಕಂಡ ಎಲ್ಲಾ ವಿಷಯಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕಾಗಿರುವುದರಿಂದ ಹಾಗೂ ಪ್ರಕರಣವು ಪ್ರಸ್ತುತ ವಿಚಾರಣೆ ಹಂತದಲ್ಲಿರುವುದರಿಂದ ರಾಜ್ಯ ಕಾರ್ಯಕಾರಿ ಸಭೆ ನಡೆಸುವುದು ನ್ಯಾಯಾಲಯದ ನಿಂದನೆಯಾಗುತ್ತದೆ. ಕಾರಣ ಈ ಪ್ರಕರಣವು ನ್ಯಾಯಾಲದಲ್ಲಿ ಇತ್ಯರ್ಥಗೊಳ್ಳುವವರೆಗೂ ತಮ್ಮ ಅಮೂಲ್ಯವಾದ ಸಹಕಾರ ನೀಡುವಂತೆ ತಮ್ಮಲ್ಲಿ ಕೋರುತ್ತೇನೆ.
ಗೌರವಗಳೊಂದಿಗೆ
ತಮ್ಮ ವಿಶ್ವಾಸಿ
(ಶಂಭುಲಿಂಗನಗೌಡ ಪಾಟೀಲ) ರಾಜ್ಯಾಧ್ಯಕ್ಷರು