ಸರಕಾರಿ ಶಾಲೆಗಳಿಗೂ ವಿದ್ಯುತ್ ಫ್ರೀ ವಿದ್ಯುತ್ ನೀಡಿ: ನಮಗೂ ಗ್ಯಾರೆಂಟಿ ಕೋಡಿ:ಸಿಎಮ್ ಅವರಿಗೆ ತಲುಪುವವರೆಗೂ ಶೇರ ಮಾಡಿ..
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ವೇಳೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನ ಜಾರಿ ಮಾಡಲು ಮುಂದಾಗಿದ್ದು, ಇದೇ ಸಮಯದಲ್ಲಿ ಸರಕಾರಿ ಶಾಲೆಗಳನ್ನ ಬೆಳೆಸುವುದಕ್ಕೂ ಸರಕಾರಕ್ಕೆ ಅವಕಾಶ ಒದಗಿಬಂದಿದೆ.
ಹೌದು… ಸರಕಾರಿ ಶಾಲೆಗಳ ನಿರ್ವಹಣೆಗೆ ಸರಕಾರ ಹಣ ಕೊಡುತ್ತದೆಯಾದರೂ ವಿದ್ಯುತ್ ಬಿಲ್ ಭರಿಸಲು ಹಣವನ್ನ ನೀಡುತ್ತಿಲ್ಲ. ಹೀಗಾಗಿ ದಾನಿಗಳು ಕಂಪ್ಯೂಟರ್ ಕೊಟ್ಟರೂ ಅವುಗಳ ಬಳಕೆಯಾಗದೇ ಕೊಠಡಿಯಲ್ಲಿ ಕೊಳೆಯುವ ಸ್ಥಿತಿಯಿದೆ.
ರಾಜ್ಯ ಸರಕಾರ ಇದೇ ಸಮಯದಲ್ಲಿ ಸರಕಾರಿ ಶಾಲೆಗಳಿಗೂ ಉಚಿತ ವಿದ್ಯುತ್ ನೀಡಿದರೇ ಬಡವರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗುವ ಜೊತೆಗೆ ಸರಕಾರಿ ಶಾಲೆಗಳಿಗೆ ಚೈತನ್ಯ ತುಂಬಿದಂತಾಗುತ್ತದೆ.
ಸರಕಾರಿ ಶಾಲೆಗಳನ್ನ ಉಳಿಸಬೇಕು, ಬೆಳೆಸಬೇಕು ಎಂದು ಮನದಲ್ಲಿ ಅಂದುಕೊಳ್ಳುವ ಮನಸ್ಸುಗಳು ಕೂಡಾ ಸರಕಾರದ ಕಣ್ಣು ತೆರೆಯುವಂತೆ ಮಾಡುವ ಮೂಲಕ, ಉಚಿತ ವಿದ್ಯುತ್ ಭಾಗ್ಯವನ್ನ ಸರಕಾರಿ ಶಾಲೆಗಳಿಗೆ ಒದಗಿಸಿಕೊಡಬೇಕಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ಬರುವವರೆಗೂ ಈ ಮಾಹಿತಿಯನ್ನ ಶೇರ್ ಮಾಡಿ, ಸರಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಸಹಕರಿಸಿ.