ಪ್ರೀತಿಗೆ ಶರಣು
ಕಾರಣ ಕೇಳದಿರು ನಿನ್ನ ಪ್ರೀತಿಸುತ್ತಿರಲು..
ವ್ಯಕ್ತಪಡಿಸಲಾರೆನು ಮನದೊಳಗಿನ ಅಳಲು..||
ಸವಿಯಬೇಕು ಬಿಡದಂತೆ ಈ ದೇಹ
ಸಿಗುವೆಯಾ ನೀ ಈ ಸ್ಪರ್ಶಕೆ
ಮನಸ್ಸು ತೊಳಲಾಟದಿ
ನಿನ್ನ ನೆನಪಲಿಹದು
ಭಾವನಾತ್ಮಕ ಲೋಕದೊಳು
ನಿನ್ನ ಮನ ಬಯಸಿದೆ
ಸೇರಬೇಕಿದೆ ನಿನ್ನ ಜೊತೆ ಬೆರೆತಾಗ ನನ್ನ ಲೋಕವು ನಿನ್ನುಸಿರಿನ ಸ್ಪರ್ಶ..
ತಿಳಿ ತಂಪಲ್ಲಿ ಮನಕೆ ಯಾಕೋ ಬೇಸರ..
ಗುನುಗುತಿಹೆ ಪದೇ ಪದೇ ನಿನ್ನ ಹೆಸರು
ಮದುವೆ ಎಂಬುದು ಸ್ವರ್ಗ ದಲಿ ನಿಶ್ಚಯವಾಗಿರುವುದಂತೆ??
ನನಗೆ ನೀ ಪರಿಚಯವಾದ ಕ್ಷಣ
ಪುನರ್ಜನ್ಮದಿ ನಂಟಾಗಿ
ನಾವು ಈ ಜನ್ಮದಿ ನಿನ್ನ ಸೇರಲು
ದೇವರು ಹೀಗೆ ಪರಿಚಯಿಸಿರಬಹುದೇನೋ
ನನಗೊಂದೂ ತಿಳಿಯದಾಗಿಹೆ ಈ ದಿನ ಏನೇ
ಆದರೂ ನಲ್ಲೆ ನಿನ್ನ ವರಿಸಬೇಕೆಂಬ ಹಂಬಲ.. ನೀಡಲು ಸಿದ್ಧ ಈ ಹೃದಯ.
ಯಾರ ಮನವು ನೋಯಿಸದೆ ಮಾಡಬೇಕಿದೆ ಪ್ರೀತಿಯ ಸಫಲ
ಕಲ್ಪನೆಯಲಿ ಕಾಣುತಿಹೆನು ನಿನ್ನ..ನಿನ್ನ ಸೇರಿದಾಗಿನಿಂದ ಪ್ರತಿ ದಿನವೂ ಸೇರುವ ಕನಸು
ಕಂಡ ಕನಸುಗಳ ನನಸಾಗಿಸೊ ಶಕ್ತಿ ಕೊಡು
ಜಗತ್ತು ಕತ್ತಲಾಗುವ ಮುನ್ನ..||
ನನಸಾಗುವ ಕನಸುಗಳ ನೋಡಲು ನೀಡು ನನಗೆ ಎಂದು ಭಕ್ತಿ ಭಾವದಿ ಕೋರುತಿಹ ಮನ ದೇವರನ್ನ
ನನಗೆ ಸಿಕ್ಕ ನನ್ನ ನಲ್ಲೆ ನನ್ನವಳಾಗಿ ಬರ್ತಾಳಾ ಎಂಬ ಹಪಾಹಪಿ
ಕನಸ ಕಾಣುವ ಬಯಕೆಯೊಳು ದೇವರ ಮುಂದೆ ಬೇಡುತಿರುವೆ
ನಿಜ ಮಾಡಿ ಬಿಡು ನನ್ನ ಮನದ ಕೋರಿಕೆಯನ್ನ ಎಂದು
ಈ ಪ್ರೀತಿಯಲಿ ಸೋತು ಶರಣಾದ ಈ ಜೀವಕೆ ನೀಡು ವರವೊಂದನ್ನು
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨