ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಬ್ಬಾಗವಾಗಿದೆ.ಹೌದು. ಕಳೆದ ಮೂವತ್ತು ವರ್ಷದಿಂದ ಶಿಕ್ಷಕರ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದ್ಯ ಸಂಘದ ರಾಜ್ಯಾಧ್ಯಕ್ಷರಾಗಿರುವ ಶಂಭುಲಿಂಗಗೌಡ್ರನ್ನು ಸಂಘದ ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ ಎಂದು ಹೇಳಲಾಗುತ್ತಿತ್ತು.ಆದ್ರೆ ಸಂಘದ ಬೈಲಾ ಪ್ರಕಾರ ಹೊಸ ಅಧ್ಯಕ್ಷರ ನೇಮಕ (ಆಯ್ಕೆ)ಮಾಡಲು ಬರುತ್ತದೆ.
ರಾಜಧಾನಿ ಹೋರತುಪಡಿ ಯಾವುದೇ ಜಿಲ್ಲೆಗಳ ಜಿಲ್ಲಾದ್ಯಕ್ಷರ ಗಮನಕ್ಕೆ ತರದೆ,ಕೇವಲ ಬೆರಳೆಣಿಕೆಯಷ್ಟು ಪದಾಧಿಕಾರಿಗಳ ನೇತೃತ್ವದಲ್ಲಿ ಹೊಸ ಅದ್ಯಕ್ಷರ ಆಯ್ಕೆಯಾಗಿದೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ..
ಈ ಕುರಿತು ಪಬ್ಲಿಕ್ ಟುಡೆಯೊಂದಿಗೆ ಮಾತನಾಡಿದ ಶಂಭುಲಿಂಗನಗೌಡ್ರು, ನಾನು ಶಾಲಾ ಪ್ರಾರಂಭೊತ್ಸವದ ನಿಮಿತ್ಯ ಕೊಪ್ಪಳ ಜಿಲ್ಲೆಯಲ್ಲಿದ್ದೆ, ನಾನು ಯಾವುದೇ ರಿತಿಯ ರಾಜೀನಾಮೆ ಪತ್ರ ನೀಡಿಲ್ಲ. ಏಕಾಏಕಿ ಈ ಪ್ರಕ್ರಿಯೆ ನಡೆದಿದೆ. ಹೊಸ ಅಧ್ಯಕ್ಷರ ಆಯ್ಕೆ ಅಸಿಂಧುವಾಗಿದ್ದು, ಅವರ ಹಿಂದೆ ಯಾವುದೊ ಒಂದು ಶಕ್ತಿ ಇದೆ. ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ವಿವರಣೆ ನೀಡಿದರು. ಸಂಘದ ರಾಜ್ಯಾಧ್ಯಕ್ಷರು ಮರಣ ಹೊಂದಿದರೆ, ನಿವೃತ್ತಿಯಾದರೆ ಮಾತ್ರ ಹೊಸ ಅದ್ಯಕ್ಷರ ನೇಮಕ ಮಾಡಲು ಬರುತ್ತದೆ. ಆದರೆ ಇಲ್ಲಿ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ ಎಂದರು..
ಆತ್ಮೀಯ ರಾಜ್ಯದ ಎಲ್ಲಾ ಪ್ರಾ.ಶಿಕ್ಷಕ ಬಂಧುಗಳೇ ಹಾಗೂ ಜಿಲ್ಲಾ ತಾಲೂಕಿನ ಅಧ್ಯಕ್ಷರು- ಕಾರ್ಯದರ್ಶಿಗಳೆ
ಇಂದು ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ನಡೆದ ಘಟನೆಯನ್ನು ನೋಡಿ ದಿಗ್ಭ್ರಮೆಯನ್ನು ಉಂಟುಮಾಡಿದೆ.
ನಾನು ಶ್ರೀ ಶಂಭುಲಿಂಗನಗೌಡ ರಾಜ್ಯಾಧ್ಯಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆದ ನಾನು ಇಂದು ಕೊಪ್ಪಳ ತಾಲೂಕಿನ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸ್ವಯಂಘೋಷಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಶಾಲು ಹಾರವನ್ನು ಹಾಕಿಕೊಂಡಿರುವುದನ್ನ ಗಮನಿಸಿದ್ದೇನೆ
ತಮಗೆ ತಿಳಿದಿರಲಿ ನನ್ನ ಬಳಿ ಯಾರು ಕೂಡ ಇಂದಿನ ಅಧಿಕಾರ ಸ್ವೀಕರಿಸುವ ಈ ವಿಚಾರವನ್ನು ಚರ್ಚಿಸಿಲ್ಲ
ಅಷ್ಟೇ ಏಕೆ ನಾನು ಇದುವರೆಗೂ ಕೂಡ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ರಾಜೀನಾಮೆಯನ್ನು ಸಹ ನೀಡಿರುವುದಿಲ್ಲ … ಹಾಲಿ ಅಧ್ಯಕ್ಷರು ಇರಬೇಕಾದಲ್ಲಿ ಅದು ಸಂಘದ ಕಚೇರಿಗೆ ಬಂದು ಈ ರೀತಿಯ ಕಾರ್ಯಕ್ರಮವನ್ನು ಮಾಡುವುದನ್ನು ನಾನು ಖಂಡಿಸುತ್ತೇನೆ
ಮುಂದುವರೆದು ಯಾವ ಜಿಲ್ಲಾಧ್ಯಕ್ಷರಿಗೂ ಜಿಲ್ಲಾ ಕಾರ್ಯದರ್ಶಿಗಳಿಗೂ ಹಾಗೂ ರಾಜ್ಯ ಸಂಘದ ಪ್ರಮುಖ ಪದಾಧಿಕಾರಿಗಳಿಗೂ ಹಾಗೂ ರಾಜ್ಯದ ಅಧ್ಯಕ್ಷರಾದ ನನಗೆ ಕೂಡ ಯಾವುದೇ ಮಾಹಿತಿಗಳನ್ನು ನೀಡದೆ ಸಭೆಗಳನ್ನು ನಡೆಸಿರುವುದು ಅಕ್ಷಮ್ಯ ಅಪರಾಧ
ಯಾವುದೇ ವಿಚಾರಗಳಿರಲಿ ರಾಜ್ಯ ಕಾರ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯಗಳನ್ನ ತೆಗೆದುಕೊಳ್ಳಬೇಕಾಗುತ್ತದೆ… ಯಾವುದನ್ನು ಮಾಡದೆ ಸಂಘದ ನೀತಿ ನಿಯಮ ಬೈಲಾ ಗಳನ್ನ ಬದಿಗೊತ್ತಿ ಈ ರೀತಿಯಾಗಿ ಮಾಡಿರುವಂತಹ ಕ್ರಮ ಕಾನೂನಿನ ಅಡಿಯಲ್ಲಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.
ನಾನು ರಾಜ್ಯದ ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.. ಯಾವುದೇ ರಾಜೀನಾಮೆಯನ್ನು ನಾನು ನೀಡಿರುವುದಿಲ್ಲ ಮತ್ತು ಇತ್ತೀಚಿಗೆ ನನ್ನ ಅನುಪಸ್ಥಿತಿಯಲ್ಲಿ ನಡೆದಿರುವ ಯಾವುದೇ ಸಭೆಗಳು ಅಧಿಕೃತವಲ್ಲ … ನನ್ನ ಅಧ್ಯಕ್ಷತೆಯನ್ನೂ ಬಿಟ್ಟು ನಡೆದಿರುವ ಸಭೆಗಳು ಅನಧಿಕೃತ ಆದ ಕಾರಣದಿಂದ ಹಾಲಿ ನಾನೇ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಇದ್ದೇನೆ ಎಂಬ ಅಂಶವನ್ನ ತಮಗೆ ಸ್ಪಷ್ಟಪಡಿಸುತ್ತಿದ್ದೇನೆ
ತಾವ್ಯಾರು ಕೂಡ ಗೊಂದಲಕ್ಕೆ ಒಳಗಾಗಬಾರದಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿದೆ.
ಇಂತಿ ನಿಮ್ಮ ಪ್ರೀತಿಯ
ಶಂಭುಲಿಂಗನಗೌಡ ಪಾಟೀಲ್, ರಾಜ್ಯಾಧ್ಯಕ್ಷರು ..ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ )ಬೆಂಗಳೂರು