ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ.ಖಾಸಗಿ ಶಾಲೆಗಳೂ ಕೂಡ ಎರಡು ದಿನಗಳಿಂದ ಆರಂಭವಾಗಿವೆ..
ಸಾರ್ವಜನಿಕರು ಮನಸ್ಸು ಮಾಡಿದರೆ ಮಾತ್ರ ಅವ್ಯವಸ್ಥೆಯನ್ನು ಸರಿಮಾಡಬಹುದು.. ಶಿಕ್ಷಣ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಬ್ರಷ್ಟಾಚಾರ ಹೆಚ್ಚುತ್ತಿದೆ..
ಬೆಂಗಳೂರು: ಟಿ.ಸಿ ಕೊಡಲು 9 ನೇ ತರಗತಿಯ ವಿದ್ಯಾರ್ಥಿಯೊಬ್ಬನ ಪೋಷಕರಿಗೆ 5,000 ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುತ್ತಿದ್ದಾಗ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಾಚಾರ್ಯ ವಿ. ನಾರಾಯಣ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬುಧವಾರ ನಾರಾಯಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯು ಅನುಧಾನಿತ ಪ್ರೌಢಶಾಲೆಯಾಗಿದೆ. ವಿದ್ಯಾರ್ಥಿಯೊಬ್ಬರ ತಾಯಿ ಶ್ರೀಮತಿ ದಿವ್ಯಾ ಎನ್ನುವರು ನಾರಾಯಣ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವರು ನೀಡಿದ್ದ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿದೆ..
ಬೆಂಗಳೂರಿನ ಲೋಕಾಯುಕ್ತ ಡಿಎಸ್ಪಿ ಬಸವರಾಜ ಮಗದುಮ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.