ಮೇಲ್ಕಂಡ ಎಷಯಕ್ಕೆ ಸಂಬಂಧಿಸಿದಂತೆ, ಏಕ ಕಡತ ಪ್ರಸ್ತಾವನೆಯಲ್ಲಿ _2022_2023ನೇ ಸಾಲಿನ ವರ್ಗಾವಣೆ ಕಾಯ್ದೆ / ನಿಯಮಗಳಿಗೆ ಕಾಯ್ದೆಗಳಿಗೆ ತಿದ್ದು ಪಡಿ ತಂದು, ಶಿಕ್ಷಕ ಸ್ನೇಹಿ ವರ್ಗಗಳನ್ನು ಕೈಗೊಳ್ಳಲು ತೀರ್ಮಾನಿಸಿ ಅಧಿಸೂಚನೆ ಹೊರಡಿಸಿದ್ದು. ಅದರಂತೆ ವರ್ಗಾವಣೆ ಪ್ರಕ್ರಿಯೆಗಳು, ಪ್ರಾರಂಭಿಸಲಾಗಿರುತ್ತದೆ ಅದರಂತೆ, ವರ್ಗಾವಣೆಯ ಮೊದಲನೆ ಹಂತವಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ನ್ಯೂನತೆಗಳು ಕಂಡುಬಂದಿದ್ದರಿಂದ ಹೆಚ್ಚುವರಿ ಶಿಕ್ಷಕರ ಕೌನ್ಸಲಿಂಗ್ ಪ್ರತಿಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿರುತ್ತದೆ. ಮುಂದುವರೆದು, ಸದರಿ ಪ್ರಕ್ರಿಯೆಯಡಿ ವರ್ಗಾವಣೆ ಬಯಸಿ ಸುಮಾರು 75,000 ಶಿಕ್ಷಕರ ಅರ್ಜಿಗಳ ಸ್ವೀಕೃತವಾಗಿದ್ದು, ಕನಿಷ್ಠ 30000 ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯ ಲಾಭವನ್ನು ಪಡೆಯುತ್ತಾರೆ. ಆದರಿಂದ ಹೆಚ್ಚುವರಿ ಶಿಕ್ಷಕರ ಕೌನ್ಸಲಿಂಗ್ ಹಾಗೂ ಸಾಮಾನ್ಯ ವರ್ಗಾವಣೆ ಪುಕ್ರಿಯೆಗಳನ್ನು ಮುಂದುವರೆಸಲು ಅವಕಾಶ ನೀಡುವಂತೆ ಕೋರಲಾಗಿದ್ದು ಹಾಗೂ ಈ ಸಂಬಂಧ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘವು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ 2022-23ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಕೌನ್ಸಲಿಂಗ್ ಹಾಗೂ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳನ್ನು ಮುಂದುವರೆಸಲು ಸರ್ಕಾರವು ಅನುಮತಿಸಿದೆ ಎಂದು ನಮಗೆ ತಿಳಿಸಲು ನಿರ್ದೇಶಿಸಲಾಗಿದೆ.