ಹೆಬಸೂರ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ..
ಧಾರವಾಡ ಜಿಲ್ಕೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ ಜರುಗಿತು.ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಪಠ್ಯ ಪುಸ್ತಕ ಸಮ ವಸ್ತ್ರ ವಿತರಿಸಿ ಪುಷ್ಪ ಪ್ರೋಕ್ಷಣೆಯೊಂದಿಗೆ ಪೆನ್ನು ಪೆನ್ಸಿಲ್ ನೀಡಿ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಹಾಗೂ ಕ್ಷೀರ ಭಾಗ್ಯ ಬಿಸಿ ಊಟ ಯೋಜನೆ ಅನುಷ್ಠಾನ ಮಾಡಲಾಯಿತು.ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪ.ಗಾಳಿ.ಸದಸ್ಯರಾದ ವೆಂಕಣ್ಣ ತಳವಾರ.ಲಾಡಸಾಬ ಶೇಖಸನದಿ.ರಾಜೇಸಾಬ ನಾಯ್ಕರ.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಗುತ್ತಿಗೆದಾರರಾದ* *ದೀಪಾಲಿ .ಪ್ರ.ಗು.ರತ್ನಾ ಗ್ರಾಮಪುರೋಹಿತ.ಹಾಗೂ ಲತಾ ಗ್ರಾಮಪುರೋಹಿತ.ದ್ರಾಕ್ಷಾಯಿಣಿಕೊರಗರ. ಕಂಬಳಿ.ಸುವರ್ಣ ಮಡಿವಾಳರ.ಸುಧಾ.ಕೊಣ್ಣೂರ.ಗೀತಾ.ಕೆಂಚರಡ್ಡೇರ.ದೇವೇಂದ್ರ.ಪತ್ತಾರ.ಉಪಸ್ಥಿತರಿದ್ದರು