ಕೆಂಪು ಬಸ್
ಕ್ಷೇತ್ರಕಾರ್ಯ ಮುಗಿಸಿಕೊಂಡು ನಮ್ಮ ಊರಿಂದ ಕನ್ನಡ ವಿಶ್ವವಿದ್ಯಾಲಯದೆಡೆಗೆ ಚಾರಣ ಬೆಳೆಸಬೇಕಾಯಿತು. ಅದಕ್ಕಾಗಿ ಹಡಗಲಿಯಿಂದ ಹೊಸಪೇಟೆಗೆ ಹೋಗುವ ಬಸ್ ಗಳಿಗಾಗಿ ಹಡಗಲಿ ಬಸ್ ತಂಗುದಾಣದಲ್ಲಿ ಬೆಳಗ್ಗೆ 6.೦೦ಗಂಟೆಯಿಂದ ಕಾಯುತ್ತಿದ್ದೇನು. ಅದೇ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ತಂಗುದಾಣದ ಮುಂಭಾಗ ಹಡಗಲಿ -ಹೊಸಪೇಟೆ – ಹಡಗಲಿ Non stop ಎಂಬ ನಾಮ ಫಲಕದ ಕೆಂಪುಬಸ್ ಹಾಜರಾಯಿತು. ಅಂತೂ ಇಂತೂ ಸರಿಯಾದ ಸಮಯಕ್ಕೆ ಬಸ್ ಸಿಕ್ಕಿದಕ್ಕೆ ಅತೀವ ಸಂತೋಷವಾಯಿತು. ಈ ವಾಹನ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಕಣ್ಮನ ಸೆಳೆಯುವಂತಹ ವಿಶೇಷ ಆ ಸರ್ಕಾರಿ ಬಸ್ ನಲ್ಲಿ ಏನಿದೆ ಅಂತೀರಾ. ನಿಜ ಆ ಬಸ್ ನ ಸೌಷ್ಠವದ ಚಿಕ್ಕ ಪರಿಚಯ ಮಾಡುವೆ. ನಾವು ಹಬ್ಬ-ಹರಿದಿನಗಳಲ್ಲಿ ಅಭ್ಯಂಜನ ಸ್ನಾನ ಮುಗಿಸಿ, ಮುಂದಿನ ಕಾರ್ಯಗಳಿಗೆ ಸಿದ್ಧತೆಯಾಗುವಂತೆ ಈ ಕೆಂಪುಬಣ್ಣದ ಕಲ್ಯಾಣ ಕಾರ್ನಾಟಕ ಸಾರಿಗೆ ಬಸ್ ಹೊಸಪೇಟೆಯೆಡಗೆ ಹೊರಡಲು ಮಧುವಣಗಿತ್ತಿಯಂಗೆ ಸಿದ್ದವಾಗಿತ್ತು. ಇದನ್ನು ಏರುತ್ತಿದ್ದಂತೆ ಮನಸ್ಸಿಗೆ ಏನೋ ಆಹ್ಲಾದಕರವಾದ ಅನುಭವ. ಅಂದರೆ ಬಸ್ ಪ್ರವೇಶ ಮಾರ್ಗದ ಚಾಲಕರ ಸೀಟಿನ ಮುಂಭಾಗ ಮಲ್ಲಿಗೆ ಮತ್ತು ಊದುಬುತ್ತಿಯ ಪರಿಮಳವು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದವು. ಈ ಬಸ್ ಗೆ ನಿರ್ವಹಕ (ಕಂಡೆಕ್ಟರ್ ಇರಲಿಲ್ಲ)ರಿಲ್ಲದ ಕಾರಣ ಪ್ರಯಾಣಿಕರಿಗೆ ಚಾಲಕರೇ ಲವಲವಿಕೆಯಿಂದ ಪ್ರವೇಶ ಮಾರ್ಗದಲ್ಲೆ ಟಿಕೆಟ್ ನೀಡುತ್ತಿದ್ದರು. ಕೆಲವೊಂದು ಚಾಲಕರು ಬೆಳಗ್ಗೆಯೇ ಕರ್ತವ್ಯಕ್ಕೆ ಹಾಜರಾಗಬೇಕಲ್ಲ ಎಂದು ನಿದ್ದೆ ಮೊಂಪುರುವಿನಲ್ಲೆ ತರಾತುರಿಯಲ್ಲಿ ಎದ್ದು ಸಪ್ಪೆಮುಗದಲ್ಲಿ ಬರುವರನ್ನು ನೋಡಿದ್ದೇನ್ನೆ. ಅಂದರೆ ಈ ಚಾಲಕರು ಅವರಿಗೆ ಅಪವಾದವಾಗಿದ್ದಾರೆ. ಸರ್ಕಾರಿ ಬಸ್ ನಾವೇಕೆ ಸ್ವಚ್ಛವಾಗಿಡಬೇಕು. ಅದರಿಂದ ನಮಗಾಗುವುದಾದರೂ ಏನು. ಎನ್ನುವವರ ಮಧ್ಯ ಇವರು ವಿಭಿನ್ನ. ಒಂದು ಹೆಜ್ಜೆ ಸ್ವಚ್ಛತೆಯೆಡಗೆ ಎಂಬ ಧ್ಯೇಯ ಹಾಗೂ ಪ್ರಮಾಣಿಕತೆಯು ಎದ್ದು ಕಾಣುವಂತಿತ್ತು. ಬಸ್ ನ ಪ್ರತಿಯೊಂದು ಹಾಸನಗಳು ಸ್ವಚ್ಚಂದದಿಂದ ಕಂಗೊಳಿಸುತ್ತಿದ್ದವು. ಬಸ್ ಏರಿದಾಗ ಸುಪ್ರಭಾತ ಗೀತೆಗಳು ಪ್ರಯಾಣಿಕರ ಕಿವಿಗಳಿಗೆ ಇಂಪನ್ನು ನೀಡುತ್ತಾ, ಭಕ್ತಿಭಾವದೆಡೆಗೆ ಕರೆದೊಯ್ಯುತ್ತಿದ್ದವು. ಈ ಬಸ್ ನಲ್ಲಿ ಚಾಲಕರೇ ತಮ್ಮ ಸ್ವಂತ ಹಣದಲ್ಲಿ ಧ್ವನಿಮುದ್ರಕಗಳನ್ನು ಅಳವಡಿಸಿಕೊಂಡಿದ್ದರು. ನಿಜಕ್ಕೂ ಇದನ್ನು ನಾವು ಶ್ಲಾಘಿಸಲೇ ಬೇಕು. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಲೇಬೆಕು ಧ್ವನಿ ಮುದ್ರಕದಲ್ಲಿನ ಧ್ವನಿಯು ಮತ್ತೊಬ್ಬರಿಗೆ ಕಿರುಕುಳ ನೀಡದಂತೆ ಹಿತವಾಗಿ ಆಲಿಸುವಷ್ಟು ಮಾತ್ರ ಹಾಕಿದ್ದರು. ಹಡಗಲಿಯಿಂದ ಹಗರಿಬೊಮ್ಮನಳ್ಳಿಯವರೆಗೆ ಸುಪ್ರಭಾತ ಗೀತೆಗಳನ್ನು ಆಲಿಸಿದೆನು. ಹಗರಿಬೊಮ್ಮನಳ್ಳಿಯಿಂದ ಹೊಸಪೇಟೆ ತಲುಪವವರೆಗೆ ಕರ್ನಾಟಕ ರತ್ನ, ನಟಸಾರ್ವಭೌಮ ಡಾ. ರಾಜಕುಮಾರ ಅವರ ಚಲನಚಿತ್ರ ಗೀತೆಗಳು ಪ್ರಯಾಣಿಕರನ್ನು ರಂಜಿಸುತ್ತಿದ್ದವು. ಕನ್ನಡದ ಅದರಲ್ಲೂ ಹಳೆಯ ಗೀತೆಗಳಿಗೆ ಮಾತ್ರ ಸ್ಥಾನವುಂಟು. old is gold ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ನಿಜಕ್ಕೂ ಕನ್ನಡ ಸಾಹಿತ್ಯದ ಗೀತೆಗಳ ಮುಂದೆ ಎಲ್ಲಾ ಶೂನ್ಯವೆನ್ನಿಸಿತು. ಚಾಲಕರ ಬಸ್ ಚಾಲನೆಯಲ್ಲಿ ತೋರಿತ ನೈಪುಣ್ಯತೆ ಹಾಗೂ ಕೌಶಲ್ಯ ನಿಜಕ್ಕೂ ಉಬ್ಬೇರಿಸುವಂತಿತ್ತು. ಕನ್ನಡ ಗಾಯನ ಗೀತೆಗಳ ಮುಂದೆ ಹೊಸಪೇಟೆ ತಲುಪಿದ್ದೇ ಗೊತ್ತಾಗಲಿಲ್ಲ. ಸರ್ಕಾರಿ ಬಸ್ ಗಳನ್ನು ತೆಗಳುವವರಿಗೆ ಈ ಬಸ್ ವಿರುದ್ಧವಾಗಿ ನಿಲ್ಲುತ್ತದೆ. ನಿಜಕ್ಕೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಈ ವಾಹನ ಮಾದರಿಯಾದುದು. ಈ ಮಾದರಿಯನ್ನು ಎಲ್ಲಾ ಸರ್ಕಾರಿ ಬಸ್ ಗಳು ಅಳವಡಿಸಿಕೊಂಡರೇ ಎಷ್ಟು ಚಂದಾ ಅಲ್ವಾ ಅನ್ನಿಸುತ್ತಿತ್ತು. ಪ್ರಯಾಣಿಕರನ್ನು ಸರ್ಕಾರಿ ಬಸ್ ಗಳಿ ಕಡೆಗೆ ಮುಖಮಾಡಲು ಇದೊಂದು ಉತ್ತಮ ಯೋಜನೆಯೂ ಹೌದು. ಹೊಸಪೇಟೆಯನ್ನು ಕೇವಲ ೨ಗಂಟೆಯ ಅವಧಿಯಲ್ಲಿ ತಲುಪಿದರು. ಇಲ್ಲಿ ಚಾಲಕರ ಸಮಯ ಪ್ರಜ್ಞೆಗೆಯನ್ನು ಗೌರವಿಸಲೇಬೆಕು. ಕೊನೆಗೆ ಹೊಸಪೇಟೆಯಲ್ಲಿ ಚಾಲಕರನ್ನು ಬೇಟಿಯಾಗಿ ನನ್ನ ಮನದ ಇಂಗಿತವನ್ನು ಹಂಚಿಕೊಂಡಿದ್ದಕ್ಕೆ ಅವರ ಸಹ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದರು. ಕೊನೆಗೆ ನಿಮ್ಮ ಹೆಸರು ಸರ್ ಅಂದಾಗ ಹನುಮಂತಪ್ಪ ಎಂದು ಸಂಭೋದಿಸಿ, ಒಂದು ಸುಂದರ ಪಟಕ್ಕೆ ಸಾಕ್ಷಿಯಾದರು. ಈ ಪ್ರಯಾಣ ನಿಜಕ್ಕೂ ಒಂದು ಅಧ್ಭುತ ಅನುಭವವನ್ನುಂಟು ಮಾಡಿತು. ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದ ಕಲ್ಯಾಣ ಕರ್ನಾಟಕ ಸಾರಿಗೆಯ ಎಲ್ಲಾ ಪದಾಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ.
ಜೈ ಕಲ್ಯಾಣ ಕರ್ನಾಟಕ ಸಾರಿಗೆ
ಡಿ. ವೀರೇಶ, ಸಂಶೋಧನಾರ್ಥಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ