ಕಿತ್ತೂರ: ರಾಜಗುರು ಗುರುಭವನದಲ್ಲಿ ನಡೆದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶ್ರೀಯುತ ಆರ್ ಪಿ ಜುಟ್ಟನವರ್ ನಿವೃತ್ತಿ ಪ್ರಯುಕ್ತ ನಮ್ಮ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಕಿತ್ತೂರ ಘಟಕದವತಿಯಿಂದ,ಸಮಸ್ತ ತಾಲೂಕಾ ಶಿಕ್ಷಕಿಯರ ಪರವಾಗಿ ದಂಪತಿಗಳಿರ್ವರನ್ನೂ ಅತ್ಯಂತ ಅಭಿಮಾನದಿಂದ ಸನ್ಮಾನಿಸಲಯಿತು.
ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಸೂಡಿ ಅವರು ಮಾತನಾಡಿ, ನಿವೃತ್ತಿ ನಂತರವೂ ಅವರ ಮಾರ್ಗದರ್ಶನ ಇಲಾಖೆಗೆ ಇರಲಿ ಎಂದು ಹಾರೈಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪುಷ್ಪಾ ಕೆ,ಸುಜಾತಾ ಪಾಟೀಲ್,ನಂದಾ ಭಟ್,ವಿಜಯಾ ಪಾಟೀಲ್,ಮಂಜುಷಾ ದೇಶಪಾಂಡೆ ಸೇರಿದಂತೆ ಕ,ಸಾ,ಪು,ಶಿ,ಸಂಘ ಕಿತ್ತೂರು ಸರ್ವ ಹಂತದ ಪದಾಧಿಕಾರಿಗಳು ಉಪಸ್ಥಿತರಿದ್ದರು..
ನಿನ್ನೆ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು..