ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕ ಇಬ್ಬರು ಲೋಕಾಯಯಕ್ತ ಪೋಲಿಸರ್ ಅತಿಥಿ!!
ಕೇವಲ 5 ಸಾವಿರ ರೂಪಾಯಿಗೆ ಕೈಚಾಚಿ…ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು….
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ವಿಶೇಷ ಚೇತನ ಶಿಕ್ಷಕ ನರಸಿಂಹಮೂರ್ತಿ ಅವರು 3 ತಿಂಗಳ ಬಾಕಿ ವೇತನ ಬಿಡುಗಡೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನ ಬಿಇಓ ಇಟ್ಟಿದ್ದರಂತೆ.
ಇಂದು ಬಿಇಒ ಕಚೇರಿಯಲ್ಲಿ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಿಇಓ ಶಿವಲಿಂಗಯ್ಯ.
ಬಿಇಓಗೆ ಮಧ್ಯ ವರ್ತಿಯಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ರಮೇಶನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.