ನಾಲ್ಕು ಎಸ್ಎಸ್ಎಲ್ಸಿ ಪರೀಕ್ಷೆ ಕೇಂದ್ರಗಳ ಮೇಲೆ FIR ದಾಖಲು…
ಈ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗಬಹುದು!! ಪರೀಕ್ಷೆ ಬರೆಯುವ ಅಬ್ಯರ್ಥಿಗಳನ್ನೆ ಬದಲು ಮಾಡಬಹುದು.!!
ಕಲಬುರ್ಗಿ: ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ..ಇದೇ ಮೋದಲ ಬಾರಿಗೆ ವೆಬ್ಕಾಸ್ಟಿಂಗ್ ಮೂಲಕ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ..
ಪರೀಕ್ಷಾ ಅಕ್ರಮ ತಡೆಗಟ್ಟುವುದು ಹಾಗೂ ಪರೀಕ್ಷಾ ಸಿಬ್ಬಂದಿಗಳ ಮೇಲೆ ಹದ್ದಿನ ಕಣ್ಣು ಇಡಲು ಶಿಕ್ಷಣ ಇಲಾಖೆ ಕಾರ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ..
ಜೀವರ್ಗಿ ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಹಾಕಲಾಗಿದ್ದ ಸಿಸಿಟಿವಿ ಹಾನಿ ಮಾಡಲಾಗಿದೆ..
ನರೋನದ ಸರ್ಕಾರಿ ಶಾಲೆಯಲ್ಲಿ ಪರಿಕ್ಷೆ ಬರೆಯಲು ಬಂದಿದ್ದ ಅಬ್ಯರ್ಥಿಯನ್ನು ಬದಲು ಮಾಡಲಾಗಿದೆ..
ಎಡಕಲವ್ಯ ಮಾದರಿ ಶಾಲೆಯಲ್ಲಿ ಸಿಸಿಟಿವಿ ಜಖಂ ಮಾಡಲಾಗಿದೆ..
ಸರಕಾರಿ ಪ್ರೌಢಶಾಲೆ ನಲೋಗಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಮೋಬೈಲ್ ತೆಗೆದುಕೊಂಡು ಹೋಗಲಾಗಿದೆ..
ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೀವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..
ಆದ್ರೆ ಇದು ಕಿಡಿಗೆಡಿಗಳ ಕೃತ್ಯ ಎಂದು ಹೇಳಲಾಗುತ್ತಿದ್ದರು ಕೂಡ ಪರೀಕ್ಷಾ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ..
ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರ ಗಳಿಗೆ ಹಗಲು ರಾತ್ರಿ ಪೋಲಿಸ್ ಭದ್ರತೆ ನೀಡುವಂತೆ ಪೋಲಿಸ್ ಇಲಾಖೆಗೆ ಮಾನ್ಯ ಉಪ ನಿರ್ದೇಶಕರು ಕಲಬುರಗಿ ಇವರು ವಿನಂತಿಸಿದ್ದಾರೆ..