ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖದನ್ವಯ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಚುನಾವಣಾ ಕಾರ್ಯದ ನಿಮಿತ್ಯ ದಿನಾಂಕ : 26.03.2024 ರಂದು ಸಮಯ ಮಧ್ಯಾಹ್ನ 2 : 45 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ತಾ ಆಳಂದ ಜಿ। ಕಲಬುರಗಿ ಶಾಲೆಯ ಮತಗಟ್ಟೆಗೆ ಬೇಟಿ ನೀಡಿದಾಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ಈ ಎರಡು ಶಾಲೆಗೆ ಮಧ್ಯಾಹ್ನವೆ ಬೀಗ ಹಾಕಲಾಗಿತ್ತು.
ದಿನಾಂಕ : 26.03.2024 ರಂದು 5 ನೇ ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು ಹಾಗೂ 9 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು ಶಾಲೆಯ ಸಮಯದ ಅವಧಿ ಮಧ್ಯಾಹ್ನ 4 : 30 ರ ವರೆಗೆ ಇದ್ದು ನೀವುಗಳು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಚುನಾವಣಾ ಕಾರ್ಯದ ನಿಮಿತ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ತಾ| ಆಳಂದ ಜೀ ಕಲಬುರಗಿ ಶಾಲೆಯ ಮತಗಟ್ಟೆಗೆ ಬೇಟಿ ನೀಡಿದಾಗ ಶಾಲೆಗೆ ಬೀಗ ಹಾಕಿ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಲಬುರಗಿ ರವರ ಮುಂದೆ ಮೇಲಾಧಿಕಾರಿಗಳು ಮುಜುಗರಕ್ಕೆ ಒಳಗಾಗಲು ಕಾರಣಿಭೂತರಾಗಿರುತ್ತಿರಿ.
ಪ್ರಯುಕ್ತ ನಿಮ್ಮ ಈ ಕರ್ತವ್ಯಲೋಪ ಬೇಜವಾಬ್ದಾರಿಯ ಬಗ್ಗೆ ಈ ಪತ್ರ ಮುಟ್ಟಿದ 12 ಗಂಟೆಯೋಳಗೆ ಸೂಕ್ತ ದಾಖಲಾತಿಗಳೊಂದಿಗೆ ಉತ್ತರ ಸಲ್ಲಿಸಲು ತಿಳಿಸಿದೆ. ಒಂದು ವೇಳೆ ನೀವುಗಳು ಉತ್ತರ ಸಲ್ಲಿಸದೆ ಇದ್ದಲ್ಲಿ ನೀವು ಹೇಳುವುದು ಏನು ಇಲ್ಲವೆಂದು ತಿಳಿದು ನಿಮ್ಮಗಳ ಮೇಲೆ ನಿಯಮಾನುಸಾರ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಸೂಚಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಳಂದ ಜೀ ಕಲಬುರಗಿ..
ಇವರಿಗೆ.
ಮುಖ್ಯೋಪಾಧ್ಯಾಯರು,
ಸರಕಾರಿ ಹಿರಿಯ ಪ್ರಾಥಮಿಕ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ
ತಾ| ಆಳಂದ ಜೀ ಕಲಬುರಗಿ ..