ರಾಜಕೀಯ ಪಕ್ಷಗಳಿಂದ ಲಿಂಗಾಯತರಿಗೆ ಅನ್ಯಾಯ..ಮಾಜಿ ವಿಧಾನ ಪರಿಷತ್ ಸದಸ್ಯ: ಮೋಹನ ಲಿಂಬಿಕಾಯಿ..
ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಸಮಾಜದಿಂದ ಯಾವ ಪಕ್ಷಕ್ಕೆ ಬೆಂಬಲ..ಇಲ್ಲಿದೆ ನೋಡಿ ಮಾಹಿತಿ..
ಹುಬ್ಬಳ್ಳಿ: ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರು ಇವತ್ತು ಗೋಕುಲ ರಸ್ತೆಯಲ್ಲಿರುವ ಕೆ ಎಸ್ ಶರ್ಮಾ ಇನ್ಸ್ಟಿಟ್ಯೂಟ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು..
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ಕುಂದಗೋಳದ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು..
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ ಲಿಂಬಿಕಾಯಿ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಲಿಂಗಾಯತ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು… ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಲಿಂಗಾಯತ ಸಮಾಜದ ಜನರಿದ್ದಾರೆ..ಆದ್ರೂ ಕೂಡ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದೆ.. 5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ.. ಈ ಬಾರಿ ಧಾರವಾಡ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಲಿಂಗಾಯತ ರಿಗೆ ಟಿಕೆಟ್ ನೀಡುತ್ತಾರೆ ಎಂದು ಭಾವಿಸಿದ್ದಿವಿ, ಆದ್ರೆ ಕಾಂಗ್ರೆಸ್ ಹೈಕಮಾಂಡ ಕುರುಬ ಸಮಾಜಕ್ಕೆ ಟಿಕೆಟ್ ನೀಡಿದೆ..ನಮಗೆ ಅಂದರೆ ಲಿಂಗಾಯತ ತರಿಗೆ ಆದ ಅನ್ಯಾಯದ ಕುರಿತು ಪಕ್ಷದ ವೇದಿಕೆಯಲ್ಲಿ ತಿಳಿಸಿರುವೆ.
ಕಾಂಗ್ರೆಸ್ ಪಕ್ಷದ ಅಬ್ಯರ್ಥಿಯಾಗಿರುವ ವಿನೋದ ಅಸೂಟಿಯವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ರು..
ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಲಿಂಗಾಯತ ಸಮಾಜದವರು ಜಯ ಗಳಿಸಿ, ಎಮ್ ಎಲ್ ಎ ಆಗಿದ್ದಾರೆ.. ಧಾರವಾಡ ಲೋಕಸಭೆ ಗೆ ಲಿಂಗಾಯತ ಅಬ್ಯರ್ಥಿ ಯಾಗಿದ್ದರೆ ಒಳ್ಳೆದಿತ್ತು ಎಂದು ತಿಳಿಸಿದ್ರು..
ಮಾಜಿ ಶಾಸಕ ಎಸ್ ಐ ಚಿಕನಗೌಡ್ರ ಮಾತನಾಡಿ, ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲಿಲ್ಲ, ಸ್ವತಂತ್ರವಾಗಿರುವೆ..ಸಮಾಜದ ಜೊತೆ ಇರುತ್ತೇನೆ..ಮುಂದಿನ ದಿನಗಳಲ್ಲಿ ಅಂದರೆ ಲೋಕಸಭೆ ಚುನಾವಣೆ ಬಳಿಕ ತಮ್ಮ ನಿರ್ಧಾರ ಹೇಳುವುದಾಗಿ ತಿಳಿಸಿದ್ರು..