ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ ರಾಜ್ಯ ಪ್ರಶಸ್ತಿ ನೀಡಿದ್ದು ಇದೇ ಮೊದಲು…
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯ ಸಂಘ (ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ಬಾಗಲಕೋಟ ವತಿಯಿಂದ ದಿನಾಂಕ 25/11/2023 ಶನಿವಾರರಂದು ಬಾಗಲಕೋಟೆಯ ಅಂಬೇಡ್ಕರ ಭವನದಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ರಾಜ್ಯ ದಸರ್ಕಾರಿ ಶಾಲೆಯಲ್ಲಿ 4 ರಿಂದ 5ನೇ ತರಗತಿ ಓದುತ್ತಿರುವ ವಿವಿಧ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಗೈದ ಬಹುಮುಖ ಪ್ರತಿಭೆ ಇರುವಂತ ಮಕ್ಕಳಿಗೆ ವಿತರಿಸುವ ರಾಜ್ಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅದ್ದೂರಿಯಾಗಿ . ವಿವಿಧ ಜಿಲ್ಲೆಗಳಿಂದ ಸರಕಾರಿ ಶಾಲೆಯ ಮಕ್ಕಳು ಆಗಮಿಸಿ ತುಂಬಾ ಸಂತೋಷದಿಂದ ಪ್ರಶಸ್ತಿ ಸ್ವೀಕರಿಸಿದರು..
ಬಾಗಲಕೋಟೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಚ್ ವೈ ಮೇಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನ್ಯ ಶ್ರೀ ಪಿ ಎಚ್ ಪೂಜಾರ್ ವಿಧಾನಸಭಾ ಸದಸ್ಯರು ಕಾರ್ಯಕ್ರಮ ಉದ್ಘಾಟಿಸಿದರು , ಗಣ್ಯರು ಎಲ್ಲರು ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಸಲ್ಲಿಸಿದರು. ಶ್ರೀ ಪಿ.ಹೆಚ್ ಪೂಜಾರ್ ರವರು ಕಾರ್ಯಕ್ರಮದ ಕುರಿತು ಮಾತನಾಡಿ ಅತ್ಯಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಮ್. ಜಾನಕಿ ಇವರು ಮಕ್ಕಳಿಗೆ ಪ್ರೇರಣಾದಾಯಕ ವಾದಂತಹ ಈ ಕಾರ್ಯಕ್ರಮದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಬಿ ಕೆ ನಂದನೂರ ರವರು ಕಾರ್ಯಕ್ರಮದ ಕುರಿತು ಮಾತನಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ್.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ದಿನಾಚರಣೆ ನಿಮಿತ್ತ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿದೆ.ಮಕ್ಕಳ ದಿನಾಚರಣೆ ಸಂಬಂಧ ಮಕ್ಕಳ ಪ್ರತಿಭೆ ಗುರ್ತಿಸಿ ಸನ್ಮಾನಿಸುವ ನಮ್ಮ ಸಂಘದ ಈ ಕಾರ್ಯಕ್ರಮ ರಾಜ್ಯಕ್ಕೆ ಪ್ರಥಮವಾಗಿದ್ದು ಮಾದರಿಯಾಗಿದೆ ಎಂದರು.
ನಿ.ಲೆಕ್ಕಾದೀಕ್ಷಕರು ಮತ್ತು ಹಿರಿಯ ಸಾಹಿತಿಗಳಾದ ಹೆಚ್ ಎಂ ಜುಟ್ಟಲ್ ರವರು”ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುವ ಸಾಧಕ ಬಾದಕಗಳು” ಕುರಿತು ಉಪನ್ಯಾಸ ನೀಡಿದರು. ಬಾಗಲಕೋಟೆ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ.ಎಂ ಎಸ್ ಬಡದಾನಿ ಸರ್ ಇವರು ಕಾರ್ಯಕ್ರಮದ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಾಜಶ್ರೀ ಸಜ್ಜೇಶ್ವರ ಹಾಗೂ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಎಲ್. ಸಿ.ಯಂಕಂಚಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದ ಗೌರವ ಆಹ್ವಾನಿತರನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಲಲಿತ.ಎಸ್.ಕಾಯಿ ರವರು ಸ್ವಾಗತಿಸಿದರು.ಕಾರ್ಯಕ್ರಮದ ರೂಪುರೇಷೆಗಳನ್ನು ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಹೆಚ್ ಟಿ ಹೇಮಾ ಕೊಡ್ಡಣ್ಣನವರು ಯೋಜಿಸಿ ನಿರ್ವಹಿಸಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ಕೆಯಾದ ಸರಕಾರಿ ಶಾಲಾ ಮಕ್ಕಳು ಪಾಲಕರು ಆಗಮಿಸಿ ಪ್ರಶಸ್ತಿ ಸ್ವೀಕರಿಸಿ ಅತ್ಯಂತ ಸಂತಸ ವ್ಯಕ್ತಪಡಿಸಿ ರಾಜ್ಯಕ್ಕೆ ಮಾದರಿಯಾದ ಈ ಕಾರ್ಯಕ್ರಮ ಕುರಿತು ಮಾತನಾಡಿ ಇಂತಹ ಅದ್ಭುತ ಕಾರ್ಯಕ್ರಮ ಆಯೋಜಿಸಿ ಸರಕಾರಿ ಶಾಲಾ ಮಕ್ಕಳ ಸಂತಸಕ್ಕೆ ಪ್ರೋತ್ಸಾಹ ಕ್ಕೆ ಕಾರಣವಾದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಎಚ್ ಟಿ ಕೊಡ್ಡನವರ್, ಜಿಲ್ಲಾಧ್ಯಕ್ಷರಾದ ಶ್ರೀಮತಿ ಲಲಿತಾ.ಎಸ್ ಕಾಯಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪರ್ವೀನ್ ನದಾಫ್ ಇವರ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು..