ಸೇವೆಯೇ ಜೀವನದ ಪರಮೋಚ್ಚ ಧ್ಯೇಯ
ರವೀಂದ್ರ ಯಲಿಗಾರ.
.ಮುನವಳ್ಳಿ: “ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ. ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ” ಎಂದು ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ.ರವೀಂದ್ರ ಯಲಿಗಾರ ತಿಳಿಸಿದರು. ಅವರು ಪಟ್ಟಣದಲ್ಲಿ ಮುನವಳ್ಳಿಯ ಸ್ನೇಹಜೀವಿ ಶಿಕ್ಷಕರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯರಾದ ಸಹಕಾರಿ ಧುರೀಣರಾದ ರವೀಂದ್ರ ಯಲಿಗಾರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ. ಜನತಾ ಶಿಕ್ಷಣ ಸಮಿತಿಯ ಕೋಶಾಧ್ಯಕ್ಷರಾಗಿ. ದಿ. ಮುನವಳ್ಳಿ ಲಿಬರಲ್ ಸೊಸೈಟಿ ಅಧ್ಯಕ್ಷ ರಾಗಿ.ಎ.ಪಿ.ಎಂ.ಸಿ ಚುನಾಯಿತ ಪ್ರತಿನಿಧಿಯಾಗಿ ಹತ್ತು ಹಲವು ರಂಗಗಳಲ್ಲಿ ತಮ್ಮನ್ನು ತೊಡಗಿಕೊಂಡ ಹಿರಿಯರು. ಇವರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ “ಸಹಕಾರಿ ರತ್ನ” ಪ್ರಶಸ್ತಿ ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು.
ಪ್ರಯುಕ್ತ ಮುನವಳ್ಳಿಯ ಸ್ನೇಹಜೀವಿ ಶಿಕ್ಷಕರ ಬಳಗದ ಸದಸ್ಯರು ಶ್ರೀಯುತರಿಗೆ ಸತ್ಕರಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ್ ವಾಗೇರಿ, ಹಿರಿಯ ನಿವೃತ್ತ ಶಿಕ್ಷಕರಾದ ಎ ಎ ಅಣ್ಣಿಗೇರಿ ಮುಖ್ಯೋಪಾಧ್ಯಯರಾದ ಜಿ ಪಿ ಪತ್ತಾರ್ . ಬಿ ಎಸ್ ಪೂಜಾರ್, ತಾಲೂಕ ಬಿ ಐ ಇ ಆರ್ ಟಿ ವೈ ಬಿ ಕಡಕೋಳ, ಸಿಂದೋಗಿ ಮತ್ತು ಅರಟಗಲ್ಲ ಸಿ ಆರ್ ಪಿ ಗಳಾದ ನಾಗೇಶ್ ಹೊನ್ನಳ್ಳಿ. ಜಿ ಎಸ್ ಚಿಪ್ಪಲಕಟ್ಟಿ, ಶಿಕ್ಷಕರಾದ ಪಿ.ಪಿ. ಶೀಲವಂತ್, ರವಿ ಸಣಕಲ್ಲ, ವೀರಣ್ಣ. ವಿ. ಕೊಳಕಿ, ಮಹಾಂತೇಶ್ ಜೇವೂರ, ಉಮೇಶ್ ಕರಿಕಟ್ಟಿ, ಶ್ರೀನಿವಾಸ್ ಯಲಿಗಾರ, ಮೈನುದ್ದೀನ್ ಕೊಳಚಿ, ದಾವುದ್ ಮುಲ್ಲಾ, ಪ್ರಕಾಶ್ ತಂಗೋಜಿ, ಯಲ್ಲಪ್ಪ ತಂಗೋಜಿ, ವಿರಾಜ್ ಕೊಳಕಿ ಮತ್ತು ಇತರರು ಹಾಜರಿದ್ದರು
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸುಧೀರ್ ವಾಘೇರಿ ಸ್ವಾಗತಿಸಿದರು. ಯಲ್ಲಪ್ಪ ತಂಗೋಜಿ ನಿರೂಪಿಸಿದರು. ವಿರಾಜ ಕೊಳಕಿ ವಂದಿಸಿದರು