ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಸವದತ್ತಿ ; ಬುಧವಾರ ದಿನಾಂಕ 29 ರಂದು ತಾಲೂಕಿನ ಶ್ರೀ ಬಸವೇಶ್ವರ ಪ್ರೌಢಶಾಲೆ ಯರಗಟ್ಟಿ, ಬೆಳಿಗ್ಗೆ ೮.೩೦ಕ್ಕೆ ಹಾಗೂ ತಾಲೂಕಾ ಗುರುಭವನದಲ್ಲಿ, ಮದ್ಯಾಹ್ನ ೧೨.೦೦ಗಂಟೆ ಮತ್ತು ೩.೦೦ಗಂಟೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶ್ರೀ ನಂದಿಶ ಲೈಪ್ ಕೊಚಿಂಗ್ ಹುಬ್ಬಳ್ಳಿ ಇವರಿಂದ ಒಂದು ದಿನದ ಕಾರ್ಯಾಗಾರವನ್ನು ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದು ಸವದತ್ತಿ ವಲಯದ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೊಹನ ದಂಡಿನ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.