ಸತತವಾಗಿ 11 ತಿಂಗಳ ಶಾಲೆಗೆ ಗೈರಾಗಿದ್ದರು ಕೂಡಾ ಶಿಕ್ಷಕರೊಬ್ಬರಿಗೆ ಸಂಬಳ ನೀಡಿದ ಘಟನೆ ಕಲಬುರಗಿ ಯಲ್ಲಿ ಕಂಡು ಬಂದಿದೆ.ಹೌದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆಯ ಶಿಕ್ಷಕ ರೇಣುಕಾಚಾರ್ಯ ಸತತ 11 ತಿಂಗಳು ಶಾಲೆಗೆ ಗೈರಾಗಿದ್ದಾರೆ.
ಇವರು ಶಾಲೆಗೆ ಬರದಿದ್ದರೂ ಕೂಡಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಳವನ್ನು ನೀಡಿ ದ್ದಾರೆ. ಇವರು ಮಾಡಿದ ಎಡವಟ್ಟಿನಿಂದ ಕೆಲವೊಮ್ಮೆ ಪ್ರಮಾದಗಳು ನಡೆಯುತ್ತವೆ ಎಂಬುದಕ್ಕೆ ಈ ಒಂದು ಪ್ರಕರಣವೇ ಸಾಕ್ಷಿ ಯಾಗಿದೆ. 11 ತಿಂಗಳು ಗೈರಾಗಿದ್ದರೂ ವೇತನ ಪಾವತಿಸಿ ಶಿಕ್ಷಣ ಇಲಾಖೆ ಪ್ರಮಾದವನ್ನು ಎಸಗಿದೆ.
ಈ ಒಂದು ತಪ್ಪಿನಿಂದಾಗಿ ಮೂವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಕಡ್ಡಾಯ ನಿವೃತ್ತಿ ಗೊಳಿಸಿ ಹಾಗೂ ಒಬ್ಬ ನಿವೃತ್ತ ಬಿಇಒಗೆ ನಿವೃತ್ತಿ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ವೇತನ ತಡೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಮಾಡಿದೆ.
ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇಣುಕಾಚಾರ್ಯ ಅವರು ಶಾಸಕರೊಬ್ಬರ ಸಹೋದರನಾಗಿದ್ದಾರೆ..
ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು.ವೇತನ ಬಿಡುಗಡೆ ಮಾಡಿದ ಆರೋಪ ಸಾಬೀತಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪ ಜಾಧವ, ಗುರುರಾಜರಾವ್ ಕುಲಕರ್ಣಿ ಅವರನ್ನು ಸೇವೆ ಯಿಂದ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ..
ಈ ಅವಧಿಯಲ್ಲಿ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿದ್ದ ಭರತರಾಜ ಸಾವಳಗಿ ಅವರು ಇತ್ತೀಚೆಗೆ ನಿವೃತ್ತಿ ಆಗಿದ್ದು ಅವರಿಗೆ ಬರುವ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ನಿವೃತ್ತಿ ವೇತನವನ್ನು ತಡೆಹಿಡಿಯಲಾಗಿದೆ.ಸಹ ಶಿಕ್ಷಕ ರೇಣುಕಾಚಾರ್ಯ ಅವರು 2011ರ ಅಕ್ಟೋಬ ರ್ನಿಂದ 2012ರ ಆಗಸ್ಟ್ ವರೆಗೆ ಕೆರಿ ಅಂಬಲಗಾ ಗ್ರಾಮದ ಶಾಲೆಗೆ ಹಾಜರಾಗಿರಲಿಲ್ಲ.
ಆಗ ವೇತನ ಬಿಡುಗಡೆ ಮಾಡಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಆಗಿದ್ದ ಭರತರಾಜ ಸಾವಳಗಿ, ಚಂದ್ರಶೇಖರ ದೇಗಲಮಡಿ,ವೆಂಕಯ್ಯ ಇನಾಮದಾರ, ಹಿಂದಿನ ವಲಯ ಸಹಾಯಕ ಶಿಕ್ಷಣಾಧಿಕಾರಿ ಜೈ ಪ್ರಕಾಶ ಅಕ್ಕಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪಾ ಜಾಧವ, ಗುರುರಾಜರಾವ್ ಕುಲಕರ್ಣಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೆಚ್ಚುವರಿ ಆಯುಕ್ತರು ಸೂಚನೆ ನೀಡಿದ್ದು
ತನಿಖೆ ಬಳಿಕ ನಾಲ್ವರ ವಿರುದ್ಧ ಕ್ರಮ ಜರುಗಿ ಸಲಾಗಿದೆ.