ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ.
ಯಾದಗಿರಿ:
ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ (Department of Revenue) ಎಂಟು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ (Dr. Sushila B) ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಗಳ ಸಭೆಗೆ ಗೈರಾಗಿದ್ದರು ಜತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ.ಶ್ರೀಮಂತ್ (Shrimanth), ಬಸವರಾಜ್ (Basavaraj), ಇಮ್ಯಾನುವೆಲ್ (Emmanuel), ಸಿದ್ದಲಿಂಗಪ್ಪ (Siddalingappa) ಅಮಾನತಾದ ಗ್ರಾಮ ಆಡಳಿತಾಧಿಕಾರಿಗಳು.
ಗಿರೀಶ್ ರಾಯಕೋಟಿ (Girish Raykoti) ಹಾಗೂ ಬಸವರಾಜ್ ಬಿದಾರಾರ (Basavaraj biradar) ಅಮಾನತಾದ ಕಂದಾಯ ನಿರೀಕ್ಷಕರು. ಅಲ್ಲದೆ ಯಾದಗಿರಿ (Yadgiri) ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಡಿಎ ಸೂಗುರೇಶ್ (SDA Suguresh) ಹಾಗೂ ಎಫ್ಡಿಎ ಮಹೇಶ್ (FDA MAhesh) ಸಹ ಅಮಾನತುಗೊಂಡಿದ್ದಾರೆ.