ಕನ್ನಡ ಪ್ರೀತಿ
ಕನ್ನಡ ಗಾಳಿಯು ಉಸಿರಿತು
ಏಳು ಬೇಗ ಬೆಳಗಾಯಿತು ಎಂದು
ಉದಯದೊಳು ಏಳುತ
ಮೂಡಿತು ಕನ್ನಡ ಕವಿತೆಯೊಂದು
ಕನ್ನಡ ಕವಿತೆಯ ಬರೆಯುತ
ಹೇಳಿತು ನಲ್ಲೆಗೆ ಕನ್ನಡ ಪ್ರೀತಿ
ಯಾವ ಭಾಷೆ ನಿನ್ನದಾದರೇನು
ನಾ ನುಡಿಯುವೆ ಸವಿಗನ್ನಡ
ಏನ ಹೇಳಲಿ ನಿನ್ನ ಸೊಬಗ
ನನ್ನ ಮಾತೃ ನುಡಿಯಲಿ
ಕಲಿಯಬೇಕು ನೀ ಕನ್ನಡ
ಅರಳು ಹುರಿದಂತೆ ನುಡಿಯಬೇಕು ಪ್ರೀತಿಯಲಿ
ಪ್ರೀತಿ ಬೆರೆತ ಭಾವದೊಳು
ಸೇರುತಲಿ ಭಾಷೆ ಬಂಧ ಬೆಸೆಯಲಿ
ಕನ್ನಡ ನುಡಿಗಳಲಿ ಮೂಡಲಿ ಕವಿತೆ
ನಮ್ಮಿಬ್ಬರ ಮಿಲನದಿ ಹೊಳೆಯಲಿ
ಎರಡೂ ಅಂತರ್ಯದೊಳು ಮೂಡಲಿ
ಕನ್ನಡ ಪ್ರೀತಿ ಕನ್ನಡ ರೀತಿ ನುಡಿ ಪ್ರೇಮ
ಮಧುರ ನುಡಿಯದು ಅಮರ
ನಡೆ ನುಡಿಗಳು ಬೆರೆಯುತ ತೋರಲಿ ಭಾಷಾಭಾಂಧವ್ಯ
ಬೆಳೆಯಲಿ ಕನ್ನಡ ಪ್ರೀತಿ
ಜೀವದೊಳು ಅಮರವಾಗಲಿ ನುಡಿ ಕನ್ನಡ
ಕನ್ನಡ ನುಡಿಯು ಬೆರೆಯುತ ಮೆರೆಯಲಿ
ನಾವು ಹೆಮ್ಮೆಯ ಕನ್ನಡಿಗರೆಂದು
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨