ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಗೃಹ ಸಚಿವ ಜಿ.ಪರಮೇಶ್ವರ:ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು..
ತುಮಕೂರ:
ರಾಜ್ಯದಲ್ಲಿ ಎನ್ ತೊಲಗಿಸಿ ಓಪಿಎಸ್ ಜಾರಿ ಮಾಡುತ್ತೇವೆ ಎಂದು ಗೃಹ ಸಚವರಾದ ಜಿ ಪರಮೇಶ್ವರ ಹೇಳಿದ್ರು….
ವಿಧಾನಸಭೆ ಚುನಾವಣೆಗೂ ಮೋದಲು ಮಾತು ಕೊಟ್ಟಂತೆ ಓಪಿಎಸ್ ಜಾರಿ ಮಾಡುತ್ತೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ ಎಂದರು..
ಓಪಿಎಸ್ ಕುರಿತಂತೆ ಪರೀಶಿಲನೆ ಮಾಡುತ್ತೇವೆ ಎಂದು ಹೇಳಿಲ್ಲ ಬದಲಾಗಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುತ್ತೇವೆ ಎಂದರು..
ಓಪಿಎಸ್ ಜಾರಿ ಮಾಡಲೇಬೇಕು ಎಂದು ನೌಕರರು ಸಚಿವರಿಗೆ ಒತ್ತಾಯಿಸಿದ್ರು.ನಾವು ಕೂಡ ಓಪಿಎಸ್ ಜಾರಿ ಮಾಡಿಯೇ ಮಾಡುತ್ತೇವೆ ಎಂದರು..ಇದಕ್ಕಾಗಿ ಒಂದು ಸಮಿತಿ ಮಾಡಲಾಗಿದ್ದು, ಅದು ವರದಿ ನಿಡಿದ ಕೂಡಲೇ ಓಪಿಎಸ್ ಜಾರಿ ಮಾಡುತ್ತೆವೆ ಎಂದರು.
ಏಳನೇ ವೇತನ ಆಯೋಗ ಈಗಾಗಾಲೇ ರಚನೆಯಾಗಿದ್ದು, ಅದು ವರದಿ ನೀಡಲು ಸಮಯವಾಕಾಶ ನೀಡಲಾಗಿದೆ..ಆಯೋಗ ಸರ್ಕಾರಕ್ಕೆ ವರದಿ ನೀಡಿದ ಮೇಲೆ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದರು..
40% ಫಿಟ್ ಮೆಂಟ್ ನಲ್ಲಿ ಕೇವಲ 17% ಮಾತ್ರ ನೀಡಿದ್ದೇವೆ , ಬಾಕಿ ಇರುವ 23% ಫಿಟ್ ಮೆಂಟ್ ಹಣವನ್ನು ನೌಕರರಿಗೆ ಕೋಡುತ್ತೇವೆ ಎಂದು ಹೇಳಿದ್ರು..ಇದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಮಯದಲ್ಲಿ ನೌಕರರನ್ನು ಉದ್ದೇಶಿಸಿ ಮಾತನಾಡಿದ್ರು..
ಸರ್ಕಾರಿ ನೌಕರರ ಕ್ಯಾಶಲೇಸ್ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಕೂಡಲೇ ಈ ಯೋಜನೆಯನ್ನು ಕೂಡ ಜಾರಿ ಮಾಡುತ್ತೇವೆ ಎಂದರು.