200 ಸಸಿಗಳನ್ನು ಏಕಕಾಲದಲ್ಲಿ ನೆಟ್ಟ ಕೊಪ್ಪಳದ ಪರಿಸರ ಪ್ರೇಮ ತಂಡ, ಸಿಇಒ ಅವರಿಂದ ಮೆಚ್ಚುಗೆ..
ಕೊಪ್ಪಳ..
ಇದೊಂದು ಅವಿಸ್ಮರಣೀಯ ಹಾಗೂ ಅನುಕರಣೀಯ ಕಾರ್ಯಕ್ರಮ ರಾಹುಲ್ ರತ್ನಂ ಪಾಂಡ್ಯ.
ಕುಕನೂರ ತಾಲೂಕಿನ ತಳಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿ ಯಲ್ಲಿ ಬರುವ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯ ಅವರಣದಲ್ಲಿ ಔಷದಿಯ ಗುಣ ಹೊಂದಿರುವ 200 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶ್ರೀ ರಾಹುಲ್ ರತ್ನಂ ಪಾಂಡ್ಯ IAS ರವರು ಈ ದಿನ ಮಲ್ಲಿಕಾರ್ಜುನ ತೊದಲಬಾಗಿ ರವರ ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕಮ ಇದೊಂದು ಅವಿಸ್ಮರಣೀಯ ಹಾಗೂ ಅನುಕರಣೀಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳು ಪರಿಸರ ಪ್ರೇಮ ತಂಡದ ಅದ್ಯಕ್ಷರಾದ ಮಲ್ಲಿಕಾರ್ಜುನ ತೊದಲಬಾಗಿ ಯವರು
ನಮ್ಮ ಉದ್ದೇಶಿತ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಂಡು ಪರಿಸರ ಉಳಿಸುವ ನಿಟ್ಟಿನಲ್ಲಿ ಪಾತ್ರರಾಗಬೇಕೆಂದರು.
ಈ ಪರಿಸರ ಪ್ರೇಮ ತಂಡವು ಪ್ರತಿ ರವಿವಾರ ತಮ್ಮ ಸ್ವಂತ ಹಣದಿಂದ ಬಣ್ಣ ಖರೀದಿಸಿ, ಗಿಡಗಳನ್ನು ತಂದು ಗಿಡ ನೆಡುವುದರ ಜೊತೆಗೆ ಯಾವ ಬಣ್ಣ ಕಾಣದ ಶಾಲೆಗಳಿಗೆ ಬಣ್ಣದ ದರ್ಪಣ ಮಾಡುವುದು, ವಾಟಸಪ್ ಗ್ರುಪ್ ಮೂಲಕ ಪ್ರತಿ ರವಿವಾರದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುತ್ತದೆ. ಎಂದು ಪರಿಸರ ಪ್ರೇಮ ತಂಡದ ಸದಸ್ಯ ಎಲ್ ಐ ಲಕ್ಕಮ್ಮನವರ, ಸತೀಶ ಪಿಕೆ ಶಿವಾ ನಾಯ್ಕ ತಿಳಿಸಿದರು.