ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಕಣ್ಣೀರು ಹಾಕುತ್ತಿರುವ ಶಿಕ್ಷಕ!! ಯಾರೋ ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ?…
38 ವರ್ಷ ಸೇವೆ ಸಲ್ಲಿಸಿದ ಈ ಶಿಕ್ಷಕರಿಗೆ ಇದೆಂಥಹ ಶಿಕ್ಷೆ???
ಬೆಳಗಾವಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿಳಂಭ ಧೋರಣೆಯಿಂದ ತಮಗೆ ದೊರೆಯಬೇಕಾದ ವೇತನ ಹಾಗೂ ಪಿಂಚಣಿ ಕಳೆದ ನಾಲ್ಕು ತಿಂಗಳಿನಿಂದ ದೊರೆಯುತ್ತಿಲ್ಲ ಎಂದು ಶಿಕ್ಷಕರೊಬ್ಬರು ಕಚೇರಿಯ ಎದುರಲ್ಲಿ ಕಣ್ಣೀರು ಹಾಕಿದ್ದಾರೆ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ನಿವೃತ್ತ ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ಕಣ್ಣೀರು ಹಾಕಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ತಾನು ಜೀವನವಿಡಿ ದುಡಿದು ನಿವೃತ್ತಿ ಹೊಂದಿದ ಬಳಿಕ ಪಿಂಚಣಿ ಪಡೆಯಲು ಈ ನಿವೃತ್ತ ಶಿಕ್ಷಕನಿಗೆ ತಪ್ಪದ ನಿತ್ಯ ಅಲೆದಾಟ ಮಳೆ- ಬಿಸಿಲು ಲೆಕ್ಕಿಸದೆ ಕಚೇರಿ ಎದುರು ಗಂಟೆ ಗಟ್ಟಲೆ ಕಾದು ಕುಳಿತರೂ ಅಧಿಕಾರಿಗಳ ಸುಳಿವೇ ಇಲ್ಲ, ಪಿಂಚಣಿ ಯಾವಾಗ ಎಂಬ ಪ್ರಶ್ನೆಗೆ ನಾಳೆ ಬಾ ಅನ್ನೋ ಟೊಳ್ಳು ಭರವಸೆ,ಯಾರೂ ಕೂಡ ಈನಿವೃತ್ತ ಶಿಕ್ಷನನ್ನ ಕ್ಯಾರೆ ಅನ್ನುತ್ತಿಲ್ಲ ಇದರಿಂದ ಹತಾಶರಾಗಿ ಹೋದ ನಿವೃತ್ತ ಶಿಕ್ಷಕ ಬಿಇಓ ಕಚೇರಿಯ ಎದುರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ
ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಿಕ್ಷಕನಾಗಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ಮೆ 31 ರಂದು ನಿವೃತ್ತಿ ಹೊಂದಿದ್ದಾರೆ.
ಆದ್ರೆ ನಿವೃತ್ತಿಗೂ ಮೊದಲೇ ಆರು ತಿಂಗಳ ಮುಂಚೆ ದಾಖಲೆ ಪರಿಷ್ಕರಣೆಗೆ ಕಳುಹಿಸದೆ ಸ್ಥಳೀಯ ಅಧಿಕಾರಿಗಳು ಎಡವಟ್ಟು ಮಾಡಿದ್ದು ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ನಿವೃತ್ತಿ ಬಳಿಕ ತಮಗೆ ಸಿಗಬೇಕಾದ ಸೇವಾ, ನಿವೃತ್ತಿ ವೇತನ ಹಾಗೂ ನಾಲ್ಕು ತಿಂಗಳಿಂದ ಪಿಂಚಣಿ ಸಿಗದೆ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.
ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಹಿರಸಂಘ ಗ್ರಾಮದರಾದ ಜಿನ್ನೆಸಾಬ ಶೇಖ ಅವರು ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಿಕ್ಷಕನಾಗಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ಮೆ 31 ರಂದು ನಿವೃತ್ತಿ ಹೊಂದಿದ್ದಾರೆ.
ನಿವೃತ್ತಿಗೂ ಆರು ತಿಂಗಳ ಮುಂಚೆ ಶಿಕ್ಷಕನ ದಾಖಲೆಗಳನ್ನು ಪರಿಷ್ಕರಣೆಗೆ ಕಳುಹಿಸದೇ ಸ್ಥಳೀಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ, ಇದರಿಂದ ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ಅವರಿಗೆ ನಿವೃತ್ತಿ ಬಳಿಕ ಸಿಗಬೇಕಾದ ಸೇವಾ, ನಿವೃತ್ತಿ ವೇತನ ಹಾಗೂ ನಾಲ್ಕು ತಿಂಗಳಿಂದ ಪಿಂಚಣಿ ಸಿಗದೆ ನಿವೃತ್ತ ಶಿಕ್ಷಕ ಪರದಾಡುವಂತಾಗಿದೆ.
ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆ ಇವತ್ತು ಸೇವಾ ನಿವೃತ್ತ ಶಿಕ್ಷಕ ಸುದೀರ್ಘ 38 ವರ್ಷಗಳ ಸೇವೆ ಸಲ್ಲಿಸಿದರೂ ಕೂಡ ಪಿಂಚಣಿ ಭಾಗ್ಯಕ್ಕಾಗಿ ಕಚೇರಿ ಎದುರೆ ಕಣ್ಣೀರಿಡುವಂತಾಗಿದ್ದು ಇನ್ನಾದರೂ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ನಿವೃತ್ತ ಶಿಕ್ಷಕನ ಕಣ್ಣೀರು ಒರೆಸುತ್ತಾ ಅಂತ ಕಾಯ್ದು ನೋಡಬೇಕಿದೆ.