ತಮ್ಮ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಿಕ್ಷಕಿ ಮೇಲೆ ಬಂತು ದೇವ್ರು…ಶಾಲೆಗೆ ಭೇಟಿ ನಿಡೀದ ಅಧಿಕಾರಿಗಳಿಗೆ ಕಾದಿತ್ತು ಶಾಕ್…
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಹಿನ್ನೆಲೆ ಇಂದು (ಆ.31) ಬಿಇಓ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ತನಿಖೆ ಆರಂಭವಾಗುತ್ತಿದ್ದಂತೆ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ.
ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿರುವ ಘಟನೆ ನಡೆದಿದೆ.
ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು, ಆ.31: ಕೆಲವೊಮ್ಮೆ ನಮ್ಮ ಊಹೆಗೂ ಮೀರಿ ವಿಚಿತ್ರ ಘಟನೆಗಳು ನಡೆಯುತ್ತದೆ. ಅದರಂತೆ ಇದೀಗ ಶಾಲೆಯ ಅಕ್ರಮ ಪ್ರಶ್ನಿಸಿದ್ದಕ್ಕೆ ಮುಖ್ಯಶಿಕ್ಷಕಿ ಲಲಿತಮ್ಮ ಎಂಬುವವರ ಮೈಮೇಲೆ ಏಕಾಏಕಿ ದೇವರುಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ನಡೆದಿದೆ. ಈ ವೇಳೆ ‘ಮಾಜಿ ಸಚಿವ ಬಿಬಿ ನಿಂಗಯ್ಯ ರಕ್ತಕಾರಿ ಸಾಯ್ತಾನೆ ಬಿಡಲ್ಲ ಅವರನ್ನು ಎಂಬ ಮುಖ್ಯ ಶಿಕ್ಷಕಿಯ ಮಾತು ಕೇಳಿ ಬಿಇಓ ಹಾಗೂ ಇನ್ನಿತರ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ.
ಶಾಲೆಗೆ ಭೇಟಿ ನೀಡಿದ್ದ ಬಿಇಓ
ಶಾಲೆಯಲ್ಲಿ ಅಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಹಿನ್ನೆಲೆ ಇಂದು (ಆ.31) ಬಿಇಓ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ಶಾಲೆಯ ಕಡತಗಳ ಕುರಿತು ಮಾಹಿತಿ ಪಡೆಯಲು ಮುಂದಾಗುತ್ತಿದ್ದಂತೆ ಶಿಕ್ಷಕಿಯ ಮಾತಿನ ದಾಟಿ ದಿಢೀರ್ ಬದಲಾವಣೆಯಾಗಿ ‘ಮೊದಲು ದೇವಸ್ಥಾನ ಕಟ್ಟಿ ನಂತರ ಶಾಲೆಯನ್ನು ನಡೆಸಿ. ಯಾರನ್ನು ಬಿಡೋಲ್ಲ 9 ಮಂದಿ ಜೀವ ಪಡೆಯುತ್ತೇನೆ ಎಂದಿದ್ದಾರೆ. ಮುಖ್ಯ ಶಿಕ್ಷಕಿಯ ವಿಚಿತ್ರ ಮಾತಿನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿದ ಮೂಡಿಗೆರೆ ಬಿಇಓ
ಹೌದು, ಕುಡಿಯುವ ನೀರು, ಶೌಚಾಲಯದ ಹಣ ದುರುಪಯೋಗದ ಆರೋಪ ಕೇಳಿಬಂದಿದ್ದ ಹಿನ್ನಲೆ ಮುಖ್ಯ ಶಿಕ್ಷಕಿ ಲಲಿತಮ್ಮ ಅವರನ್ನು ತನಿಖೆ ಮಾಡಲು ಬಿಇಓ ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿದ್ದರು. ಇನ್ನು ತನಿಖೆ ಆರಂಭವಾಗುತ್ತಿದ್ದಂತೆ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿದ್ದಾರೆ. ಇದೀಗ ಮುಖ್ಯ ಶಿಕ್ಷಕಿ ವರ್ತನೆಗೆ ಎಸ್ಡಿಎಂಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಎಸ್ಡಿಎಂಸಿ ಅಧ್ಯಕ್ಷರು ಬಿಇಓಗೆ ದೂರು ನೀಡಿದ್ದಾರೆ.