ಉರ್ದು ಪ್ರತಿಭಾ ಕಾರಂಜಿ ಉದ್ಘಾಟನೆ
ಮುನವಳ್ಳಿ : “ದೇವರು ಎಲ್ಲ ಮಕ್ಕಳಲ್ಲಿ ಸಮಾನ ಕಲೆ, ಪ್ರತಿಭೆಗಳನ್ನು ನೀಡಿರುತ್ತಾನೆ.
ಯಾರೂ ಅವುಗಳನ್ನು ಸರಿಯಾಗಿ ಪೋಷಿಸಿ, ಬೆಳೆಸಿಕೊಂಡು ಬರುತ್ತಾರೋ ಅವರು ತಮ್ಮಲ್ಲಿರುವ
ಪ್ರತಿಭೆಗಳನ್ನು ಹೊರಚಿಮ್ಮಿ ಸಮಾಜದಲ್ಲಿ ಗುರುತಿಸಿಕೊಂಡು, ತಮ್ಮದೇ ಆದ ಛಾಪನ್ನು
ಮೂಡಿಸಿ, ಕೊಡುಗೆಯನ್ನು ನೀಡುತ್ತಾರೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ
ಗುರುತಿಸುವಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ” ಎಂದು ಸವದತ್ತಿ
ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ ಹೇಳಿದರು.
ಅವರು ಪಟ್ಟಣದ ಗಾಂಧಿನಗರದ ಸರಕಾರಿ ಉರ್ದು ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ
ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಮಾತನಾಡುತ್ತಿದ್ದರು.
ಮುಖಂಡರಾದ ಅಶ್ವತ್ಥ ವೈದ್ಯ ಸಮಾರಂಭವನ್ನು ಉದ್ಘಾಟಿಸಿ “ ಉತ್ತಮ ಸಂಸ್ಕಾರ ನೀಡುವವರು
ಗುರುಗಳು.ಗುರುವಿನ ಸ್ಥಾನ ದೊಡ್ಡದು.ಎಂಬುದನ್ನು ತಿಳಿಸಿ ಮಕ್ಕಳಲ್ಲಿ ಅಡಗಿರುವ
ಪ್ರತಿಭೆಯನ್ನು ಇಂದು ದೇಶಭಕ್ತಿ ಗೀತೆ ಮೂಲಕ ಆರಂಭದಲ್ಲಿ ಇಲ್ಲಿ ಮಕ್ಕಳು ಪ್ರಸ್ತುತ
ಪಡಿಸಿದರು.ಇಂತಹ ಮಕ್ಕಳು ಮುಂದಿನ ದಿನಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ
ಮಿಂಚುವಂತಾಗಲಿ.ಅವರಲ್ಲಿನ ಪ್ರತಿಭೆಗೆ ಎಲ್ಲ ಗುರುಗಳು ಪ್ರೋತ್ಸಾಹ ನೀಡುವ ಮೂಲಕ
ಪ್ರತಿಭಾ ಕಾರಂಜಿ ಯಶಸ್ವಿಯಾಗಿ ಜರುಗಲಿ” ಎಂದು ಶುಭ ಕೋರಿದರು. ಫಾರೂಕ ಬಿಸ್ತಿ
ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ
ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಎಂ.ಎಸ್.ಹೊಂಗಲ್ ಗಣ್ಯರಾದ ಅಶ್ವತ್ಥ ವೈದ್ಯ
ಅವರನ್ನು ಸನ್ಮಾನಿಸಿದ ಗೌರವಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ
ಮೈತ್ರಾದೇವಿ ವಸ್ತ್ರದ, ಶಿಕ್ಷಣ ಸಂಯೋಜಕ ಗುರುನಾಥ ಕರಾಳೆ, ಅಮೀರ ಅಹ್ಮದ, ಸಮನ್ವಯ
ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ,
ಉರ್ದು ಸಿ. ಆರ್. ಪಿ ನದಾಫ,
ಸಿ ಆರ್.ಪಿಗಳಾದ ಮೀರಾ
ಮುರನಾಳ.ಜಿ.ಎಸ್.ಚಿಪ್ಪಲಕಟ್ಟಿ.ಎನ್.ಎ.ಹೊನ್ನಳ್ಳಿ ಗಣ್ಯರಾದ ಹಾಫೀಜ್ ವಟ್ನಾಳ,
ತಂಜೀಮ ಕಮೀಟಿ ಅಧ್ಯಕ್ಷ ಮೀರಾಸಾಬ ವಟ್ನಾಳ,ಡಾ.ಬಸೀರಅಹ್ಮದ ಬೈರಕದಾರ, ರಫೀಕ ಬೇಪಾರಿ,
ಮಲ್ಲು ಜಕಾತಿ, ಎಂ.ಎಂ.ಅರ್ಕಾಟೆ, ಮೈನುದ್ದೀನ ಕೊಳಚಿ, ಎಂ.ಎಸ್.ಹೊಂಗಲ,ಪ್ರಶಾಂತ.ಹಂಪಣ್ಣವರ, ಗರೀಬಶಾ ಮಕಾನದಾರ, ಶಿಕ್ಷಕರು, ಪುರಸಭೆ ಸದಸ್ಯರು,
ಎಸ್.ಡಿ.ಎಂ.ಸಿ. ಸದಸ್ಯರು ಸೇರಿದಂತೆ ಇತರರು ಇದ್ದರು.
ಎಂ.ಎಂ.ಅರ್ಕಾಟೆ ಸ್ವಾಗತಿಸಿದರು. ಮೈನುದ್ದೀನ ಕೊಳಚಿ ನಿರೂಪಿಸಿದರು.