ಪ್ರತಿಭೆಯ ಅನಾವರಣವೇ ಪ್ರತಿಭಾ ಕಾರಂಜಿ – ಕೆ ಆನಂದಶೀಲ.
ಶಾಲಾ ಶಿಕ್ಷಣ ಇಲಾಖೆವತಿಯಿಂದ ಲಕ್ಷ್ಮೇಶ್ವರ ಪಟ್ಟಣದ ಕಲಾಂ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಲಕ್ಷ್ಮೇಶ್ವರ ಉರ್ದು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಲಕ್ಷ್ಮೇಶ್ವರ ತಾಲೂಕಿನ ತಹಶೀಲ್ದಾರಾದ ಕೆ ಆನಂದಶೀಲ ಅವರು ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ
ಅವರು,ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ
ಮುಖ್ಯವೋ,ಅದೇ ರೀತಿ ವಿದ್ಯಾರ್ಥಿಯಲ್ಲಿರುವ ಸುಪ್ತ
ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳಕಿಗೆ ತರುವುದು
ಅಷ್ಟೇ ಮುಖ್ಯವಾದ ಕೆಲಸವಾಗಿದೆ. ಇದಕ್ಕೆ ಪ್ರತಿಭಾ
ಕಾರಂಜಿ ಒಂದು ಒಳ್ಳೆಯ ವೇದಿಕೆಯಾಗಿದ್ದು, ಮಕ್ಕಳ
ಸರ್ವಾಂಗೀಣ ಅಭಿವೃದ್ಧಿಯೇ ಶಾಲಾ ಶಿಕ್ಷಣ ಇಲಾಖೆಯ
ಪ್ರಮುಖ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಮ್ ಮುಂದಿನಮನಿ ಮಾತನಾಡಿ, ಮಕ್ಕಳಲ್ಲಿ ಪ್ರಜಾಸತ್ತಾತ್ಮಕ
ಗುಣಗಳನ್ನು ಬೆಳೆಸಲು ಸಹಕಾರಿಯಾಗಲಿದೆ.
ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ
ಮಹತ್ವದ್ದು. ಇಲ್ಲಿ ಪ್ರದರ್ಶನ ನೀಡಿದ ಮಕ್ಕಳು ಮುಂದಿನ
ಹಂತವಾದ ತಾಲೂಕು, ಜಿಲ್ಲಾ, ವಲಯ, ರಾಜ್ಯ,
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗುವಂತೆ
ಪ್ರೇರಿಸಬೇಕೆಂದು ಅವರು ಸಲಹೆ ನೀಡಿದರು.
ಶಾಲಾ ಶಿಕ್ಷಕರು ತಮ್ಮ ದೈನಂದಿನ ಪಾಠ, ಪ್ರವಚನದ
ಜೊತೆ ಜೊತೆಗೆ ಮಕ್ಕಳಲ್ಲಿನ ಆಸಕ್ತಿಯನ್ನು ಗಮನಿಸಿ,ಕಲೆ,
ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ,ಕ್ರೀಡಾ
ಮನೋಭಾವನೆಯನ್ನು ಗುರುತಿಸಿ ಪ್ರೋತ್ಸಾಹಿಸುವ
ಕೆಲಸ ಮಾಡಿದರೆ, ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ
ಆಷ್ಟೇ ಮಾಡದೆ, ಅವರನ್ನು ದೇಶದ ಆಸ್ತಿಯನ್ನಾಗಿ
ಮಾಡಬಹುದು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಮ್ ಯರಗುಪ್ಪಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ದಾದಾಪೀರ್ ಮುಚ್ಚಾಲೆ ಯವರು ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸಲಿಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಉರ್ದು ಸಿಆರ್ಪಿ ಎನ್. ಎ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಕ್ತಿಯಾರ್ ಅಹಮದ್ ಗದಗ, ಎ ಆರ್ ಮಿಯಾನವರ, ಪ್ರಧಾನ ಗುರುಗಳಾದ ಎ ಎಫ್ ಬ್ಯಾಡಗಿ, ಐ ಎ ನೀರಲಗಿ, ಎಚ್ ಎಮ್ ಗುತ್ತಲ, ರಿಯಾಜ್ ಅಹ್ಮದ್ ಗದಗ, ದಾದಾಪೀರ್ ತಂಬಾಕ, ಮಮ್ಮದ್ ಹನೀಫ್ ಮಜಲಾಪುರ, ಎಂ ಎಂ ಕತಿಬ್, ಬಿ ಆರ್ ಪಿ ಯವರಾದ ಬಿ ಎಮ್ ಯರಗುಪ್ಪಿ, ಸಿ. ಆರ್ ಪಿ ಗಳಾದ ಎನ್ ಎ ಮುಲ್ಲಾ, ಸತೀಶ್ ಬೊಮಲೆ, ಉಮೇಶ್ ನೇಕಾರ ಹಾಜರಿದ್ದರು ಹಾಗೂ ಎಸ್ ಎಸ್ ಬಾವಿಕಟ್ಟಿ ಸ್ವಾಗತಿಸಿದರು, ಆರ್ ಎಫ್ ಹಳೆಮನಿ ವಂದಿಸಿದರು, ಎನ್. ಎಂ. ನಾಗಲೋಟಿ ನಿರೂಪಿಸಿದರು.ಎನ್. ಎಸ್ ಬಂಕಾಪುರ, ಆರ್. ಟಿ. ನೆಗಳೂರ ಕಾರ್ಯಕ್ರಮ ನಿರ್ವಹಿಸಿದರು.