ಧಾರವಾಡ: ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ಗೆ ದೇಶ ಸಹಿತ ವಿದೇಶಗಳಲ್ಲೂ ಭಾರಿ ಬೇಡಿಕೆ ಇದ್ದು , ಈ ಕೋರ್ಸ್ಗಳ ಅಧ್ಯಯನ ಪೂರ್ಣಗೊಳಿಸುವವರಿಗೆ ಖಾಸಗಿ ಸಹಿತ ಸ್ವಂತ ಉದ್ಯೋಗ ಮಾಡಲು ಅತ್ಯಂತ ಉಪಯುಕ್ತವಾಗಿದೆ ಎಂದು ಧಾರವಾಡದ ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯ ಶಾಖಾ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್ ಹೇಳಿದರು.
ಇಲ್ಲಿನ ಖಾಸಗಿ ಹೊಟೆಲ್ನಲ್ಲಿ ನಾಗರಾಜ ಶರಣಪ್ಪ ಕೊಟಗಿ ನೇತೃತ್ವದ ಇಂಟರನ್ಯಾಶನಲ್ ಇನ್ಸ್ಟಿಟ್ಯೂಟ ಫಾರ್ ಪ್ಯಾಶನ್ ಡಿಸೈನ್ (ಐಎನ್ಐಎಫ್ಡಿ ) ಕಾಲೇಜಿನ ಪ್ರೆಶರ್ಸ್ ಡೇ -2023 ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಪ್ರದಾಯಿಕತೆಗೆ ಜೋತು ಬೀಳುವ ಪರಿಪಾಠ ಗ್ರಾಮೀಣ ಪ್ರದೇಶಗಳಲ್ಲಿ ಇಂದೂ ಸಹ ಮುಂದುವರೆದಿರುವ ಮಧ್ಯೆಯೇ , ಎಲ್ಲೆಡೆ ಪ್ಯಾಶನ್ ಡಿಸೈನ್ ಕೋರ್ಸ್ಗಳು ಈಗ ಭಾರಿ ಜನಪ್ರಿಯಗೊಳ್ಳುತ್ತ ಸಾಗಿವೆ , ಪುರುಷರಂತೆ ಮಹಿಳೆಯರೂ ಸಹ ಎಲ್ಲ ಕ್ಷೇತ್ರಗಳಲ್ಲಿ ಸರಿಸಮಾನರಾಗಿ ಪಾಲ್ಗೊಳ್ಳುತ್ತಿದ್ದು ,ಈ ದಿಸೆಯಲ್ಲಿ ಪ್ಯಾಶನ್ ಡಿಸೈನ್ ಕೋರ್ಸ್ ಭವಿಷ್ಯದಲ್ಲೂ ಬಾರಿ ಬೇಡಿಕೆಯಲ್ಲಿರುವದು ನಿಶ್ಚಿತವಾಗಿದೆ, ಇಡೀ ವಿಶ್ವವೇ ಶರವೇಗದಲ್ಲಿ ಬದಲಾಗುತ್ತ ಸಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕೀಳರಿಮೆ ತೊರೆದು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ವಿಜಯವಾಣಿ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಪಲಮೆಂಟ್ ಟ್ರಸ್ಟ್ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗುರುರಾಜ ಹೂಗಾರ , ವಿ.ಜಿ ಪಾಟೀಲ , ಕಾಲೇಜು ಸಂಸ್ಥಾಪಕ ನಾಗರಾಜ ಕೊಟಗಿ , ಕಾಲೇಜಿ ಸೆಂಟರ್ ಹೆಡ್ ಚಂದ್ರಪ್ರಭಾ ದೇಶನೂರ , ಕೌನ್ಸಿಲರ್ ಪ್ರೀಯಾ ಹಪ್ಪಳಿ , ಪೂಜಾ ಎನ್, ಸೋನಾಲಿ ಪಾಲುದಾರರಾದ ಜಿ, ವಸುಂಧರ , ಸವಿತಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.