ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯಂತೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಳ.
ಬಹು ದಿನಗಳ ಬೇಡಿಕೆ ಹಾಗೂ ನಿರಂತರ ಪ್ರಯತ್ನದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನೀಡುವ ಗೌರವಧನದ ಮೊತ್ತವನ್ನು 10,000 ರೂಪಾಯಿ ಯಿಂದ 25,000 ರೂಪಾಯಿಗಳಿಗೆ ಏರಿಕೆ ಆಗಿದೆ ಎಂಬ ಸಂತಸದ ಸುದ್ದಿಯನ್ನು ತಮ್ಮ ಮುಂದೆ ಹಂಚಿಕೊಳ್ಳ ಬಯಸುತ್ತೇವೆ ಎಂದು ಚಂದ್ರಶೇಖರ ನುಗಲಿ ಅವರು ತಿಳಿಸದ್ದಾರೆ..
ಬಹುಮಾನದ ಮೊತ್ತವನ್ನು ಹೆಚ್ಚಿಸಲು ಸಹಕರಿಸಿದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ ಅವರಿಗೆ ವಿಶೇಷವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರಿಗೆ ಶಿಕ್ಷಣ ಇಲಾಖೆಯ ಗೌರವಾನ್ವಿತ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ, ಮಾನ್ಯ ಆಯುಕ್ತರಿಗೆ ಶಿಕ್ಷಕರ ಕಲ್ಯಾಣ ನಿಧಿಯ ಎಲ್ಲ ಗೌರವಾನ್ವಿತ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಮಯೋಚಿತ ಸಲಹೆ ಮತ್ತು ಅವರ ಪ್ರಾಮಾಣಿಕ ಪ್ರಯತ್ನದಿಂದ ಬಹುಮಾನದ ಮೊತ್ತ ಹೆಚ್ಚಿಗೆ ಆಗಿದೆ ಎಂಬ ಅಂಶವನ್ನು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಯ ಅಭಿವೃದ್ಧಿಗಾಗಿ 50,000 ರೂಪಾಯಿಗಳ ಅನುದಾನ ಕೊಡುವ ಸಂಘದ ಮನವಿಯಂತೆ ಮುಂದುವರೆಸಲಾಗಿದೆ ಎಂಬ ಅಂಶವನ್ನು ಕೂಡ ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ.