ಮತದಾನದ ಮೂಲಕ ಶಾಲಾ ಸಂಸತ್ತು ರಚನೆ..
ಲಕ್ಷ್ಮೇಶ್ವರ ಪಟ್ಟಣದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಇಂದು ಸನ್ 2023-24 ನೇ ಸಾಲಿಗೆ ದಿನಾಂಕ:08-08- 2023 ರಂದು ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. 8, 9 & 10ನೇ ತರಗತಿ ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಮಾಹಿತಿ ನೀಡಿ ಚುನಾವಣಾ ದಿನಾಂಕವನ್ನು ಶಾಲೆಯ ಸಂಸತ್ ಚುನಾವಣಾ ಅಧಿಕಾರಿ ಶ್ರೀ ಕೆ ರವಿ ಅವರಿಂದ ಘೋಷಿಸಲಾಯಿತು. ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಸಲು ಸೂಚಿಸಲಾಯಿತು. ನಂತರ ಅಭ್ಯರ್ಥಿಗಳಿಂದ ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಿ ಅಂತಿಮ ವಿದ್ಯಾರ್ಥಿಗಳನ್ನು ಘೋಷಿಸಲಾಯಿತು.
ನಿಗದಿಯಂತೆ ಇಂದು ಚುನಾವಣೆಯನ್ನು ನಡೆಸಲಾಯಿತು ಎಲ್ಲಾ ವಿದ್ಯಾರ್ಥಿಗಳು ಗುರುತಿನ ಪತ್ರದೊಂದಿಗೆ ಶಾಲಾ ಸಂಸತ್ ಚುನಾವಣೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು. ಚುನಾವಣಾ ಕರ್ತವ್ಯದಲ್ಲಿ ಶ್ರೀಮತಿ ಜಿಎಸ್ ಪಾಟೀಲ್ RO, ಶ್ರೀ ಎಸ್ ಬಿ ಬೆಟಗೇರಿ PRO, ಶ್ರೀ ಡಿಡಿ ಲಮಾಣಿ APRO, ಶ್ರೀ ಎನ್ ಎಸ್ ಬೀರನೂರ PO-1, ಕುಮಾರಿ ಲಕ್ಷ್ಮಿ ಬಳ್ಳಾರಿ PO-2 ಆಗಿ ಯಶಸ್ವಿಯಾಗಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಿಕೊಟ್ಟರು.