ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ!! ಕಾರನಲ್ಲಿ ಇದ್ದವರಿಗೆ ಯಾವುದೇ ಅಪಾಯವಾಗಿಲ್ಲ!!
ಅಪಘಾತಕ್ಕಿಡಾದವರನ್ನು ರಕ್ಷೀಸಲು ಹೋಗಿ ಇಬ್ಬರ ದಾರುಣ ಸಾವು!
ಮೈಸೂರು: ಕಾರೊಂದು ಅಪಘಾತಕ್ಕೀಡಾಗಿ ಅದಕ್ಕೆ ವಿದ್ಯುತ್ ಪ್ರವಹಿಸಿದ ಕಾರಣ ಸಹಾಯಕ್ಕೆ ಬಂದ ಇಬ್ಬರಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ನಿನ್ನೆ ಈ ಅಪಘಾತ ನಡೆದಿದೆ. ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಅಪಘಾತದ ಬಳಿಕ ಸಹಾಯಕ್ಕೆ ಬಂದ ಕಿರಣ್ ಹಾಗೂ ರವಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಅಪಘಾತ ನಡೆದಿದೆ ತಮ್ಮ ಸಹಾಯಕ್ಕೆ ಬನ್ನಿ ಎಂದು ಪೋನ ಕರೆ ಮಾಡಿ ಕರೆದಿದ್ದಾರೆ. ಮೃತರಿಗೆ ಈ ವಿಷಯ ತಿಳಿದಿರಲಿಲ್ಲ.. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಪ್ರಹಸನವಾಗಿದೆ ಎಂದು ಹೇಳಲಾಗುತ್ತಿದೆ…