ಬಸ್ನಲ್ಲಿ ನಾರಿ ಶಕ್ತಿ ಪ್ರದರ್ಶನ ಮಾಡಿದ ಪ್ರಾಚಾರ್ಯ ಹಾಗೂ ಶಿಕ್ಷಕಿ..
ಬಸ್ ನಲ್ಲಿ ಹೊ.. ಕೈ..ಡಿಶುಂ ಡಿಶುಂ….!!!
ಧಾರವಾಡ: ಮಹಿಳಾ ಪ್ರಾಚಾರ್ಯ ಹಾಗೂ ಶಿಕ್ಷಕಿಯ ನಡುವಿನ ಸೀಟಿಗಾಗಿ ನಡೆದ ಜಗಳವೊಂದು ವಿದ್ಯಾನಗರಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದುಕೊಂಡಿದೆ.
ಅಳ್ನಾವರದ ಪ್ರತಿಷ್ಠಿತ ಖಾಸಗಿ ಶಾಲೆಯ ಮಹಿಳಾ ಪ್ರಾಚಾರ್ಯ ಹಾಗೂ ಶಿಕ್ಷಕಿಯೋರ್ವರು ಸಾರಿಗೆ ಸಂಸ್ಥೆಯ “ಶಕ್ತಿ” ಲಾಭ ಪಡೆದು ಪ್ರಯಾಣಿಸುವಾಗಲೇ ಕೈ ಕೈ ಮಿಲಾಯಿಸಿದ್ದಾರೆ. ಈ ಪ್ರಕರಣ ಉಪನಗರ ಠಾಣೆಯ ಮೆಟ್ಟಿಲೇರಿದ್ದು ಮಹಿಳಾ ಪ್ರಾಚಾರ್ಯಯನ್ನ ಬಂಧನ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ಪ್ರಕರಣದ ಸಂಬಂಧಿಸಿದಂತೆ ಓರ್ವ ವಕೀಲರು ಹಾಗೂ ಓರ್ವ ಪೊಲೀಸ್ ನಡುವೆ ‘ಏನೋ’ ನಡೆದಿದ್ದು, ಪೊಲೀಸ್ ವಿರುದ್ಧ ವಕೀಲರು ಹೋರಾಟಕ್ಕೆ ಇಳಿಯುವ ಸಾಧ್ಯತೆಯಿದೆ.
ಪ್ರತಿ ದಿನ ನೀತಿ ಪಾಠ ಹೇಳಿ ದೇಶದ ಉತ್ತಮ ಪ್ರಜೆಗಳನ್ನ ನಿರ್ಮಾಣ ಮಾಡುವ ಶಿಕ್ಷಕರೇ ಇಷ್ಟೊಂದು “ಶಕ್ತಿ” ತೋರಿಸಲು ಮುಂದಾಗಿದ್ದು, ಸೋಜಿಗದ ಸಂಗತಿಯಾಗಿದೆ.
ಕಳೆದ ವಾರ ಈ ಘಟನೆ ನಡೆದಿದ್ದು, ಪಬ್ಲಿಕ್ ಟುಡೆಗೆ ಮಾಹಿತಿ ದೊರೆತಿದೆ..