ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರಲ್ಲಿ ನನ್ನ ಮನವಿ
ನೀವು ಸಂಘದವರು ನಮಗೆ GPT ಗೆ ಬಡ್ತಿ ಕೊಡಿಸಲು ಹೊರಟಿದ್ದಿರಿ. ಆದರೆ ನಮಗೆ GPT ಗೆ ಬಡ್ತಿ ಬೇಡ.
ಬಡ್ತಿ ಕೊಡಿಸಬೇಕು ಅಂತಿದ್ದರೆ ಪ್ರೌಢಶಾಲೆಗೆ ಕೊಡಿಸಿ..
2002 ರಲ್ಲಿ ಮೊದಲ ಬಾರಿಗೆ CET ಬರೆದು ವಿಷಯವಾರು ಆಯ್ಕೆ ಆದ ಶಿಕ್ಷಕರು ನಾವು.
ನಮ್ಮ ಆದೇಶ copy ಅಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅಂತ ಇದೆ. 1 ರಿಂದ 5 ನೆಯ ತರಗತಿಗೆ ಅಂತ ಇಲ್ಲ.
2002 ರ C & R ಕೂಡ 1 ರಿಂದ 7 ಕ್ಕೆ ವಿಷಯವಾರು ಶಿಕ್ಷಕರ ಆಯ್ಕೆ ಪ್ರಕ್ರಿಯೆ ಅಂತ ಇದೆ.
ನಮ್ಮನ್ನ ಯಾಕೆ ನೀವು 1 ರಿಂದ 5 ಕ್ಕೆ ಸೀಮಿತಗೊಳಿಸಲು ಹೊರಟಿದ್ದೀರಿ.
ಶಿಕ್ಷಕರು ಮತ್ತು ಸಂಘದ ಹಿತದೃಷ್ಠಿಯಿಂದ ನಿಮ್ಮ ಪ್ರಯತ್ನ ಹೀಗೆ ಇರಲಿ.
1. GPT/ PST ವಿಲೀನ ಮಾಡಿಸಿ.
ಅಥವಾ
2. 2016 ರಿಂದ ಹಿಂದೆ ಇರುವವರಿಗೆ C & R ಅನ್ವಯ ಮಾಡಿಸಬೇಡಿ. ಮೊದಲು ಇದ್ದ ಹಾಗೆ ಇರಲಿ.
2016 ರಿಂದ ಈಚೆಗೆ ಮಾತ್ರ PST /GPT ಅನ್ವಯ ಆಗಲಿ.
ಆಗ ಶಿಕ್ಷಕರಿಗೆ ಅನುಕೂಲ ಆಗುತ್ತದೆ.
ಜೊತೆಗೆ ಇನ್ನೊಂದು ಪ್ರಮುಖ ವಿಷಯ
ನಮ್ಮ ಸಂಘ 1 ರಿಂದ 7 ನೆಯ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗಿ ಉಳಿಯುತ್ತದೆ.
ಇಲ್ಲದಿದ್ದರೆ ಶಿಕ್ಷಕರು ಹಿಂಬಡ್ತಿ ಹೊಂದಿದ ಹಾಗೆ ಸಂಘವು ಹಿಂಬಡ್ತಿ ಹೊಂದಿ 1 ರಿಂದ 5 ನೆಯ ತರಗತಿ ಶಿಕ್ಷಕರ ಸಂಘ ಆಗತ್ತೆ.
ಸಂಘದ ಅಸ್ಮಿತೆ, ಘನತೆ ಕಾಪಾಡಿ… ಶಿಕ್ಷಕರನ್ನು ಉಳಿಸಿ.