ಓಪಿಎಸ್ ಜಾರಿಗೆ ಪಟ್ಟು ಹಿಡಿದ ಸರಕಾರಿ ನೌಕರರು!ಜುಲೈ ತಿಂಗಳಲ್ಲಿ ಅಂತಿಮ ತಿರ್ಮಾನ ಆಗುತ್ತಾ?ಇವತ್ತಿನ ಸಭೆ ಕುರಿತು ಒಂದು ವರದಿ ಇಲ್ಲಿದೆ ನೋಡಿ..
ಬೆಂಗಳೂರು: ರಾಜ್ಯ ಸರಕಾರ ಚುನಾವಣೆ ಪೂರ್ವ ಸಮಯದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದೆ.ಐದು ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದೆ.ಸರಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವುವುದು ಕೂಡ ಅವರ ಪ್ರಣಾಳಿಕೆಯಲ್ಲಿ ಇತ್ತು.
ಈ ಹಿಂದೆ ಎನ್ಪಿಎಸ್ ನೌಕರರ ಸಂಘದಿಂದ ಫ್ರೀಡಂ ಪಾರ್ಕನಲ್ಲಿ ಓಪಿಎಸ್ ಜಾರಿ ಮಾಡುವಂತೆ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡ ಸಂದರ್ಭದಲ್ಲಿ ಅವತ್ತಿನ ಕೆಪಿಸಿಸಿ ರಾಜ್ಯ ಘಟಕದ ಅದ್ಯಕ್ಷ ಡಿ.ಕೆ ಶಿವಕುಮಾರ ನಾನು ಸರಕಾರಿ ನೌಕರರ ಪರವಾಗಿ ಇರುತ್ತೇನೆ ಎಂದಿದ್ದರು.ಇದೀಗ ಅವರ ಸರಕಾರ ಅಧಿಕಾರಕ್ಕೆ ಬಂದಿದ್ದು ಕೂಡಲೇ ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಓಪಿಎಸ್ ಜಾರಿ ಮಾಡುವಂತೆ ಸರಕಾರಿ ನೌಕರರು ಮನವಿ ಮಾಡಿಕೊಂಡಿದ್ದಾರೆ.
ಹೌದು.ಇವತ್ತು ಎನ್ಪಿಎಸ್ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಶಾಂತಾರಾಮ ತೇಜ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಭೇಟಿ ಮಾಡಿ ಓಪಿಎಸ್ ಜಾರಿ ಮಾಡುವಂತೆ ವಿನಂತಿಸಲಾಯಿತು. ಶಿಕ್ಷಕರ ಸಂಘ, ಸೇರಿದಂತೆ ಹಲವಾರು ಸಂಘಟನೆಯ ಮುಖಂಡರು ಇವತ್ತು ಒಟ್ಟಾಗಿ ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರ ಜೊತೆ ಚರ್ಚೆ ನಡೆಸಿದರು..
ಈಗಾಗಲೇ ರಾಜ್ಯ ಸರಕಾರ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ.ಆರನೇ ಗ್ಯಾರೆಂಟಿಯಾಗಿ ಓಪಿಎಸ್ ಜಾರಿ ಮಾಡುವಂತೆ ಮಾನ್ಯ ಉಪ ಮುಖ್ಯ ಮಂತ್ರಿಯವರಲ್ಲಿ ವಿನಂತಿಸಲಾಯಿತು ಎಂದು ಶಾಂತಾರಾಮ ತೇಜ ಅವರು ಮಾಹಿತಿ ನಿಡಿದರು..
ಇದಕ್ಕೆ ಸ್ಪಂದಿಸಿರುವ ಡಿಸಿಎಮ್ ಅವರು ಕೂಡಲೇ ಮಾನ್ಯ ಮುಖ್ಯ ಮಂತ್ರಿ ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತೇವೆ, ನಿಮ್ಮ ಜೊತೆ ಮತ್ತೊಮ್ಮೆ ಸಭೆ ಕರೆಯುತ್ತೇನೆ ಎಂದು ತಿಳಿಸಿದ್ದಾರೆ ಎಂದು ಶಾಂತಾರಾನ ತೇಜ ಅವರು ಹೇಳಿದರು..
ರಾಜ್ಯ ಸರಕಾರ ಜುಲೈ ತಿಂಗಳ ಬಜೆಟ್ ನಲ್ಲಿ ಓಪಿಎಸ್ ನಿರ್ಧಾರ ಕೈಗೊಳ್ಳುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆಯನ್ನು ಇಂದು ಭೇಟಿಯಾದ ಸರಕಾರಿ ನೌಕರರು ಇಟ್ಟುಕೊಂಡಿದ್ದಾರೆ.ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಉಪ ಮುಖ್ಯ ಮಂತ್ರಿಗಳೂ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬದನ್ನು ಕಾದು ನೋಡೊಣ..
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ್ ನುಗ್ಲಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದರು.