ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಂ ರವರು ಆರೋಗ್ಯ ಸಮಸ್ಯೆಯಿಂದ (ಲಿವರ್ ಪ್ರಾಬ್ಲಂ) ಚಿಕಿತ್ಸೆಗೆ ಬೆಂಗಳೂರಿಗೆ ಆಗಮಿಸಿದ ಸುದ್ದಿ ತಿಳಿದು ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಸರ್ಕಾರಿ ನೌಕರರ ಸಂಘದ ಅತಿಥಿ ಗೃಹದಲ್ಲಿ ಉಳಿದಿದ್ದ ಜಯರಾಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು…
ಸುಮಾರು 20 ಲಕ್ಷ ಖರ್ಚಾಗುವ ಸಾದ್ಯತೆ ಇರುವುದರಿಂದ ಇಲಾಖೆ ಯಿಂದ ಆಗುವ ಅನುಕೂಲಗಳ ಬಗ್ಗೆ ಮಾತನಾಡಿದರು…
ನೌಕರರ ಸಂಘದಲ್ಲಿ ಉಳಿದುಕೊಂಡಿರುವ ಅವರಿಗೆ ಮಾನ್ಯ ಷಡಾಕ್ಷರಿಯವರ ಮತ್ತು ರುದ್ರಪ್ಪನವರ ಜೊತೆ ಮಾತನಾಡಿ ವಸತಿ ವ್ಯವಸ್ಥೆ ಅನುಕೂಲ ಮಾಡಿಕೊಡಲು ಮನವಿ ಮಾಡಿ ಒಪ್ಪಿಸಿದರು…
ಜೊತೆಗೆ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವ ಕಾರಣ ಖಜಾಂಚಿ ಶ್ರೀನಿವಾಸ ಅವರೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ಅನುಕೂಲ ಮಾಡಿಕೊಡುವಂತೆ ಅಧ್ಯಕ್ಷ ರು ವಿನಂತಿಸಿದರು…
ಜಯರಾಂರವರು ಪೂರ್ಣ ಆರೋಗ್ಯದೊಂದಿಗೆ ಮತ್ತೆ ನಮ್ಮೊಂದಿಗೆ ಸಂಘಟನೆ ಯಲ್ಲಿ ಚಲನಶೀಲರಾಗಲಿ ಎಂದು ಶುಭ ಹಾರೈಕೆಗಳು…
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಸುರೇಶ ಷಡಶ್ಯಾಳ ರಾಜ್ಯ ಸಂಘಟನಾ ಕಾರ್ಯ ದರ್ಶಿ ನಾಗನಗೌಡ ಎಂ.ಎ..ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾದ ಶರಣಬಸನಗೌಡ ಪಾಟೀಲ , ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಜುಬೇರ, ವಿಜಯಪುರ ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ಬೋಳಸೂರ, ಉಪಾಧ್ಯಕ್ಷ (ನಾ.ನಿ) ಓಂಕಾರಮೂರ್ತಿ , ಯಲಬುರ್ಗಾ ತಾಲೂಕು ಕಾರ್ಯದರ್ಶಿ ಶಾಗೋಟಿ ಇದ್ದರು..
ಇವರ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ.