ಕೋಪವೇಕೆ.?
ದಿನವಿಡೀ ಆಗಾಗ ಇಣುಕುತಿಹ
ಮನ ಮೋಬೈಲ್ ನೋಡುತ
ನಿನ್ನ ಸಂದೇಶ ಬರುವುದೇ ಈ ದಿನ
ಎನುತ ಕನವರಿಸುತಿಹ ಸಮಯ
ಯಾಕೆ ಈ ಹುಸಿ ಕೋಪ ನನ್ನ ಮೇಲೆ
ಏನು ತಪ್ಪು ಜರುಗಿಹದು ತುಸು
ಹೇಳಬಾರದೇ ಹೀಗೆ ಸುಮ್ಮನಿರಲು
ಏನು ತಿಳಿಯಬೇಕು ಈ ಮನ
ಜೀವನ ನೋವು-ನಲಿವಿನ ಆಗರ
ಸಿಹಿ-ಕಹಿ ನೆನಪಿನ ಸಾಮ್ರಾಜ್ಯ.
ಪ್ರೀತಿ-ಪ್ರೇಮದಿ ಎದೆಯ ಮೀಟಿ
ಕೋಪಗೊಳ್ಳಲು ನಾ ಮಾಡಿದ ತಪ್ಪಾದರೂ ಏನು.?
ಹೀಗೆ ನೀ ಸುಮ್ಮನಿರೆ ಏನು ತಿಳಿಯದೆ ಕುಳಿತಿರುವೆ
ಏಕೀ ಮುನಿಸು ಏನರ್ಥ ನಿನ್ನ ಮನಸಿನ ಕೋಪಕೆ
ತಿಳಿಯದೇ ಚಡಪಡಿಕೆ ಒಮ್ಮೆ ನೋಡು ನನ್ನ
ನಿನ್ನ ಕೋಪ ಪ್ರೀತಿಯಲಿ ತೋರಬಾರದೇ
ನೀ ಹೀಗೆ ಸುಮ್ಮನಿರಲು ಯಾರ ಬಳಿ
ಹೇಳಲಿ ನನ್ನ ನೋವನು ನಿನ್ನ ಹೊರತು ಬೇರಾವ
ಹೃದಯವು ಬೇಡವಾಗಿಹ ಈ ಮನಕೆ
ನಿನ್ನ ಹುಸಿ ಕೋಪ ವಿರಹದುರಿಯಲಿ ಬೇಯುವಂತಾಗಿಹೆ
ಮೆಲುವಾಗಿ ಮೈ ಸೋಕಿದ ಗಾಳಿ ನಿನ್ನ ಸ್ಪರ್ಶದಂತೆ
ತಿಳಿಯಾಗಿ ಮೈ ತಾಕಿದ ಬಿಸಿಲು ನಿನ್ನ ಬಿಸಿ ಅಪ್ಪುಗೆಯಂತೆ
ಹೇಳಬೇಕೆನಿಸುತಿದೆ ನೂರಾರು ಮಾತು..ಆದರೆ ನಿನ್ನ ಮೌನ ನನ್ನನು ಮೂಕಾಗಿಸಿದೆ..ಏಕೀ ಮುನಿಸು
ವೈ. ಬಿ ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦