Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಶಿಕ್ಷಕಿ ಮೀನಾಕ್ಷಿ ಸೂಡಿಯವರ ಕವನ “ಎವ್ವಾ ನೀ ನನ್ನ ಜೀವ ಈ ಕವನಕ್ಕೆ ರೇಖಾ ಚಿತ್ರಗಳನ್ನು ಅಣ್ಣಿಗೇರಿ ಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು

Posted on May 14, 2023 By adminpt No Comments on ಶಿಕ್ಷಕಿ ಮೀನಾಕ್ಷಿ ಸೂಡಿಯವರ ಕವನ “ಎವ್ವಾ ನೀ ನನ್ನ ಜೀವ ಈ ಕವನಕ್ಕೆ ರೇಖಾ ಚಿತ್ರಗಳನ್ನು ಅಣ್ಣಿಗೇರಿ ಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು
Share to all

ವಿಶ್ವ ತಾಯಂದಿರ ದಿನಕ್ಕಾಗಿ
ನನ್ನ ಅವ್ವನಿಗೊಂದು ಕವನ ನಮನ 💕🥰💕

(ನನ್ನ ಹೆತ್ತವ್ವನ ಪಾದಗಳಿಗೆ ಈ ಕವನ ಅರ್ಪಣೆ)

🌹ಎವ್ವಾ ನೀ ನನ್ನ ಜೀವ 🌹

ಎವ್ವ ಬೇ…
ನಿನ್ನ ಎನಂತ ವರ್ಣಿಸಲಿ???
ಪದವಿ-ಪದಕ-ಪದ ಮೀರಿದ
ಪುಣ್ಯಕೋಟಿ ನೀನವ್ವ
ನಿನ್ನ ಪ್ರೀತಿನ ಉಸಿರವ್ವ
ಈ ನನ್ನ ಜನುಮಕ
ನಿನ ಸೇವೆಯಾ ನೀಡು
ನನ್ನುಸಿರ ಕೊನೆತನಕ

ಬದುಕಿನುದ್ದಕ್ಕೂ ಬರೀ ನೋವುಂಡು ಬದುಕಿದಾಕಿ
ಮಕ್ಕಳ ಮಾರಿ ನೋಡಿ ಆಸೆನಾ ಅರಳಿಸಿಕೊಂಡಾಕಿ
ಎದ್ಯಾಗ ಸುಡೋ ಬೆಂಕಿ ಇಟಗೊಂಡ
ವಿಧಿಗೆ ಸೆಡ್ಡು ಹೊಡೆದು ನಿಂತಾಕಿ
ಬಂಡಿಗಲ್ಲಂತಾ ಕಷ್ಟಕ
ಹೆದರದ ಹೆಗಲ ಕೊಟ್ಟಾಕಿ||

ಬದುಕಿಗೆ ವಿಷ ಉಣಿಸಿದವರ ಎದುರು
ಎದ್ದು ನಿಂತು ಚಂದನ ಬಾಳೆ ನಡೆಸಿದಾಕಿ||
ಸುತ್ತ ಸಾವಿರ ವಿಷದ ಸೂಜಿಗಳಿದ್ರು ಕೆಚ್ಚೆದೆಯಲಿ ಕನಸಿನ ಬೀಜ ಬಿತ್ತಿದಾಕಿ||

ನನ್ನವ್ವ ನೀನು…ನನ ಜೀವ
ಬದುಕ ರಂಗಾಯಣದಲ್ಲಿ
ಎಲ್ಲಾ ಪಾತ್ರಗಳಿಗೂ
ಸೈ ಸೈ ಎನಿಸಿಕೊಂಡಾಕಿ||

ನೋವು ನಿರಾಸೆ ಹಾದಿಯೊಳಗ
ಗೆಲುವಿನ ಹೂ ಹಾಸಿದಾಕಿ||
ಬಂಗಾರ ಬೆಳ್ಳಿ ಹೊಲಾ ಮನಿ
ಎಲ್ಲಾನೂ ನಮ್ಮ ಕಣ್ಣಾಗ ಕಂಡಾಕಿ||

ಮಕ್ಕಳ ಮೆಟ್ಟಿಗಿ ಹತ್ತಲಿ ಅಂತ
ಜಿದ್ದಿನಿಂದ ದುಡದಾಕಿ ||
ನಮ್ಮವ್ವ ನೀನು ನನ್ನ ಜೀವ
ಗೋರಿ ಕಟ್ಟೋ ಜನರ ಮುಂದ
ಮಾರಿ ಎತ್ತಿ ನಡೆದಾಕಿ||

ಎವ್ವಾ ಸ್ವಲ್ಪ ಕೇಳು,
ನಿನ್ನ ಕಂದನ ತೊದಲ ಮಾತು
ಆ ದೇವರು ಕೂಡ ನಿನ್ನ ಸಮವಲ್ಲ
ಯಾಕಂದ್ರ ನಿನ್ನಂತ ಹಡೆದವ್ವ
ಅವನಿಗೂ ಇಲ್ಲ….


ಶ್ರೀಮತಿ ಮೀನಾಕ್ಷಿ ಸೂಡಿ
ಸಾಹಿತಿ
ಚನ್ನಮ್ಮನಕಿತ್ತೂರ.🥰

P Views: 4
ಮುಖ್ಯಾಂಶಗಳು Tags:ಶಿಕ್ಷಕಿ ಮೀನಾಕ್ಷಿ ಸೂಡಿಯವರ ಕವನ "ಎವ್ವಾ ನೀ ನನ್ನ ಜೀವ ಈ ಕವನಕ್ಕೆ ರೇಖಾ ಚಿತ್ರಗಳನ್ನು ಅಣ್ಣಿಗೇರಿ ಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು

Post navigation

Previous Post: ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಭಾವನಾತ್ಮಕ ಕವನ ಅಮ್ಮನ ಮಡಿಲು ಬೆಂಗಳೂರಿನ ಚಿತ್ರ ಕಲಾವಿದ ಸಂತೋಷ ಸಸಿಹಿತ್ಲು ಅವರ ರೇಖಾಚಿತ್ರದೊಂದಿಗೆ
Next Post: ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಭಾವನಾತ್ಮಕ ಕವನ ನಿನ್ನ ನೆನಪಿಗೆ ಬೆಂಗಳೂರಿನ ಚಿತ್ರ ಕಲಾವಿದ ಸಂತೋಷ ಸಸಿಹಿತ್ಲು ಅವರ ರೇಖಾಚಿತ್ರಗಳೊಂದಿಗೆ

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme