ನಿನ್ನ ನೆನಪಿಗೆ
ನಿನ್ನ ಎದೆಯೊಳಗೆ ಸರಸದೊಳು ಹೊಕ್ಕು
ತುಟಿಗೆ ತುಟಿ ಸೋಕಿ
ಮಧುರ ಜೇನು ಸವಿದ
ಸವಿ ನೆನಪು ಕಾಡುತಿಹದು ಗೆಳತೀ ನೀನಿಲ್ಲದ ಈ ಸಮಯ
ನನ್ನ ದುಃಖ ದುಗುಡದೊಂದಿಗೆ
ಸಂಭಾಳಿಸುತ್ತಿರುವ ಈ ಹೃದಯ
ಮತ್ತೆ ಯಾವಾಗ ನಿನ್ನ ಭೇಟಿಯಾಗುವೆ ಎನ್ನುವ ಕನವರಿಕೆಯೊಳು
ಮೋಬೈಲ್ ರಿಂಗ್ ಆದಾಗಲೊಮ್ಮೆ ನಿನ್ನದೇನೋ ಎಂದು ನೋಡುತಿಹ ಈ ಕಣ್ಣುಗಳು
ನಿನ್ನ ಬರಸೆಳೆದು ಅಪ್ಪಿ, ಪ್ರೀತಿ ಮೊಗೆಮೊಗೆದು ನೀಡಿದ ಸಮಯ ಮತ್ತೆ ಮತ್ತೆ ನೆನಪಾಗಿ ಕಾಡುತಿಹದು ಯಾವಾಗ ಮತ್ತೆ ಸೇರಬಹುದು ನಾವು ಎಂದು
ನಿನ್ನ ತೊಡೆಯ ಮೇಲೆ ಮಲಗಿದ ಪ್ರತಿ ನಿಮಿಷದ ನೆನಪಿಗೆ ಈ ಕವನ
ನೀನಲ್ಲಿ ನಾನಿಲ್ಲಿ ಪ್ರತಿ ರಾತ್ರಿ ಕನಸುಗಳ ಕನವರಿಕೆಯೊಳು
ನಿನ್ನದೇ ಧ್ಯಾನ ನನ್ನ ಬಾಳೋಳಗೆ ನಿನಗೆ ನೀಡಿ ಪ್ರೀತಿಯ ನಿರಂತರತೆಯ ಕನಸು ಕಾಣುತಲಿ ಹಗಲಿರುಳು ಹಂಬಲಿಸುತಲಿ ಕಾಯುವಂತಾಗಿಹ ಈ ಮನ
ನಿನ್ನೊಂದಿಗೆ ಕಳೆದ ಸ್ವಲ್ಪ ಸಮಯವೇ ಎಂಥಾ ರೋಮಾಂಚಕ
ನಿಜ ಬಾಳುವ ಕನಸೇ ಎಂಥಾ ನೋವು,ಸಮಾಜದ ಸಂಕೋಲೆಗಳ ಎದುರಿಸುವ
ಗಟ್ಟಿ ಮನಸ್ಸು ಮಾಡಲಾಗದ ತೊಳಲಾಟ
ಯಾಕೀ ವೇದನೆ ಎನುವಂತಾಗಿಹದು
ನಿನ್ನ ನೆನಪಿಗೆ ಕವಿಯಾಗುವ ಮನ
ರಸ ನಿಮಿಷಗಳ ನೆನಪಿನಲಿ
ಮೂಡಿಹ ಕವನ
ಎಷ್ಟು ವಿಚಿತ್ರ ನಿನ್ನ ಸೇರಲಾರದ ಈ ತೊಳಲಾಟ
ನಿನ್ನ ನೆನಪಿನ
ಮೌನದ ಹೊದೋಟದಲ್ಲಿ ಮಧುರ ಕವನ ಅರಳುತಿಹುದು
ನೀನಿರದ ವಿರಹ ಬೇಗುದಿಗೆ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦