ಅಮ್ಮನ ಮಡಿಲು
ನನ್ನ ಜೀವದ ಸೆಲೆ ನೀನು
ನಿನ್ನ ಮಡಿಲ ಕಂದ ನಾನು
ಅಮ್ಮ ಎನ್ನುವ ಎರಡಕ್ಷರ
ವರ್ಣಿಸಲಸಾದ್ಯ ಮಮತೆಯ ಮುಕುಟದಿ
ಎಷ್ಟೇ ಬೆಳೆದು ದೊಡ್ಡವರಾದರು
ತಾಯಿಯ ಮಮತೆಯ ಮಡಿಲಲಿ
ಕಂದ ನಾನು ಎಂದೆಂದಿಗೂ
ನಿನ್ನ ಪ್ರೀತಿಯ ಮುಂದೆ ಎಲ್ಲವೂ ತೃಣವಾಗಿಹದು
ನೀನಿಲ್ಲದಿರೆ ಮನೆ ಏನೋ ಕಳೆದುಕೊಂಡ ಭಾವ
ಮಕ್ಕಳ ಜೊತೆ ಅಜ್ಜಿ ಯಾಗಿ
ವಾತ್ಸಲ್ಯ ತೋರುತಿರಲು
ಮಗನ ಎದುರು ಮತ್ತೆ ಮಮತಾಮಯಿ
ಸಾಟಿಯುಂಟೇ ನಿನ್ನ ವಾತ್ಸಲ್ಯಕೆ
ಅಪ್ಪ ಅಮ್ಮನಿಗೆ ನೀನೇ ಮುದ್ದು
ಎನ್ನಲು ಮಕ್ಕಳ ಮಾತು
ಮತ್ತೆ ಬಾಲ್ಯದ ನೆನಪುಗಳು
ಅಮ್ಮ ನಿನಗೆ ನೀನೇ ಸಾಟಿ
ವಾತ್ಸಲ್ಯಕೆ ನಾ ಸದಾಕಾಲ
ಚಿರಋಣಿ ತೀರಿಸಲಾಗದು
ನಿನ್ನ ಪ್ರೀತಿಯ ಮಮತೆಯ ಕಡಲಿಗೆ
ಈ ಜನ್ಮದಿ ಋಣವ ಕೊನೆತನಕ ನೋಡಬೇಕು ನಿನ್ನ ಕಣ್ಣಂಚಲಿ ಸಂತೋಷವ
ಮಾತೆಯ ಮಮತೆಯ ಕಡಲಿಗೆ
ಸಣ್ಣ ಮಗುವಾಗುತಿಹೆ ಅನುದಿನ
ಅನುಕ್ಷಣ ಅಮ್ಮನಿರದ ಮನೆಯದು
ಹಾಳು ಬಿದ್ದ ಜಾಗ ಇರಬೇಕು
ಸದಾ ನಿನ್ನ ವಾತ್ಸಲ್ಯಕೆ ನಾ ಚಿರೃಣ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦