ವಿಶ್ವ ಕನ್ನಡ ರಕ್ಷಕ ದಳ ಬೆಳಗಾವಿ ತಾಲೂಕಾಧ್ಯಕ್ಷರಾಗಿ ಶ್ರೀರಾಮ ಬಡಿಗೇರ ನೇಮಕ
ಬೆಳಗಾವಿ : ೦೫
ವಿಶ್ವಕನ್ನಡ ರಕ್ಷಕ ದಳ ಸಂಘಟನೆಯ ಬೆಳಗಾವಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಬೆಳಗಾವಿಯ ಯುವ ಸಂಘಟಕರಾದ ಶ್ರೀರಾಮ ಬಡಿಗೇರ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಕುಮಾರ ತಳವಾರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ತಾಲೂಕಾ ಉಪಾಧ್ಯಕ್ಷರಾಗಿ ಶ್ರೀ ಫಿರೋಜ್ ತಹಶಿಲ್ದಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಾಮನ ಕುಲಕರ್ಣಿ, ಸಹಕಾರ್ಯದರ್ಶಿಯಾಗಿ ಶ್ರೀ ನಿಶಾಂತ ಕುರ್ಸೆ, ಖಜಾಂಚಿಯಾಗಿ ಕಪೀಲ್ ಗೊಂಡ್ಕರ್, ಸಂಚಾಲಕರಾಗಿ ಪ್ರವೀಣ ಸುಣಗಾರ ಹಾಗೂ ಸಹಸಂಚಾಲಕರಾಗಿ ವೀರಾಜ್ ಬಡಿಗೇರ ನೇಮಕವಾಗಿದ್ದು, ಕನ್ನಡ ನಾಡು-ನುಡಿ, ನೆಲ-ಜಲಗಳ ರಕ್ಷಣೆಯ ಹೊಣೆಯ ಜೊತೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡು-ನುಡಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.