ಡಾ. ಮೇಘನಾ ಅವರ ಹೋಳಿ ಹಬ್ಬದ ಕುರಿತು ಬರಹ
ಬಣ್ಣಗಳ ರಂಗಿನ ಹಬ್ಬ ಎಲ್ಲರ ಬದುಕನ್ನ ರಂಗಾಗಿಸಲಿ ಭಾರತೀಯ ಸಮಾಜವು ಸಾಂಪ್ರದಾಯಿಕವಾದದ್ದು, ಕಲೆ, ಆಚರಣೆ, ಹಬ್ಬ-ಹರಿದಿನಗಳನ್ನು ಚಾಚು ತಪ್ಪದೆ ಆಚರಿಸುವ ಭಾರತೀಯರಿಗೆ ಪ್ರತಿ ಹಬ್ಬಗಳ ಹಿನ್ನೆಲೆ ತಿಳಿದಿದೆ. ಹಬ್ಬಗಳು ಎಂದೊಡನೆ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಸದಾ ಜೀವಂತ. ಪ್ರತಿ ಆಚರಣೆಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಜನಜೀವನದ ಹೃದಯ ಭಾಗವಾಗಿವೆ. ವಾರ್ಷಿಕಾವರ್ತನ ಆಚರಣೆಗಳಲ್ಲಿ ಮರಳಿ ಬರುವ ಹಬ್ಬಗಳೆಲ್ಲವೂ ಸಂಬಂಧ ಬೆಸೆಯುವ ಬೆಸುಗೆಗಳಾಗಿವೆ. ಹಬ್ಬಗಳು ಸಂಬಂಧಗಳನ್ನು ಬೆಸೆಯುವ, ಸಿಹಿಯನ್ನು ಸವಿಯುವ, ಎಲ್ಲರನ್ನು ಒಗ್ಗೂಡಿಸುವ ಸಂಕೇತಗಳು. ಅಂತಹ ಹಬ್ಬಗಳಲ್ಲಿ ಹೋಳಿ…