ಮಕ್ಕಳಲ್ಲಿ ಹುದುಗಿರುವ ವಿಶಿಷ್ಟ ಕಲೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಮಕ್ಕಳ ಬೇಸಿಗೆ ಶಿಬಿರ ಗುರು ತಿಗಡಿ
ಹುಬ್ಬಳ್ಳಿ,
ಮಕ್ಕಳಲ್ಲಿ ಹಲವಾರು ಸುಪ್ತ ಕಲೆಗಳಿವೆ,ಅವುಗಳ ಅನಾವರಣ ಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳು,ಸೂಕ್ತ ವೇದಿಕೆ ಆಗಲಿವೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಗುರು ತಿಗಡಿ ಹೇಳಿದರು, ಅವರು
ಹುಬ್ಬಳ್ಳಿ ಮಹಾನಗರದ ಅರವಿಂದ ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ, ಕಲ್ಲಿ ಎಜುಕೇಶನ್ & ಡೆವೆಲಪ್ಮೆಂಟ್ ಸೊಸೈಟಿ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಶಹರ ಘಟಕ ಹುಬ್ಬಳ್ಳಿ, ಜಂಟಿ ಆಶ್ರಯದಲ್ಲಿ, ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆಯನ್ನು ನೀಡಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಮಕ್ಕಳ ಬೇಸಿಗೆ ಶಿಬಿರ ಜರುಗಿರುವುದು,ಅತೀ ಸಂತಸ ತಂದಿದೆ, ಈ ಶಿಬಿರದ ಸದುಪಯೋಗವನ್ನು ಹುಬ್ಬಳ್ಳಿಯ ಮಕ್ಕಳು ಪಡೆಯಬೇಕು ಎಂದರು, ಮಕ್ಕಳ ಸಾಹಿತ್ಯ ಸಂಬ್ರಮದ ಧಾರವಾಡ ತಾಲೂಕಿನ ಸಂಘಟಕಿ ಗಂಗವ್ವ ಕೋಟಿಗೌಡರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಈ ಶಿಬಿರವು ಅತ್ಯಂತ ವಿಶಿಷ್ಟ ರೀತಿಯಲ್ಲಿ ಜರುಗಬೇಕು, ನಾವುಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ಈ ಶಿಬಿರದಲ್ಲಿ ಪಾಲ್ಗೊಂಡು, ಮಕ್ಕಳಿಗೆ ಹೊಸಹೊಸ ವಿಷಯಗಳ ಕಲಿಕೆಗೆ ಸಹಕಾರ ನೀಡುವುದಾಗಿ ತಿಳಿಸಿದರು, ಶಿಕ್ಷಕ ಸಾಹಿತಿ ಚಲನಚಿತ್ರ ನಟ ರಾಜೀವ ಹಲವಾಯಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು, ಇಂದು ಮಕ್ಕಳಿಗೆ ಅಭಿನಯ ತರಬೇತಿ ನೀಡುವುದು ಅತೀ ಅವಶ್ಯಕತೆ ಇದೆ, ಮಕ್ಕಳಲ್ಲಿ ನಾಟಕ ಆಡುವ, ಅಭಿನಯ ಕಲೆ ಸೂಕ್ತವಾಗಿ ಇರುತ್ತದೆ,ಅದನ್ನು ಹೊರಗೆ ಹಾಕಲು, ಅವರಿಗೆ ಪ್ರೇರಣೆ ಅವಶ್ಯಕತೆ ಇದೆ, ನಾಟಕ ಆಡೋಣ ಮೂಲಕ ಅವರಿಗೆ ರಂಗ ಕಲೆಯನ್ನು ಕಲಿಸೋಣ ಎಂದರು, ಚಂದ್ರಶೇಖರ ಮಾಡಲಗೇರಿ ಎಚ್ ಎಸ್ ಬಡಿಗೇರ ಮಲ್ಲಪ್ಪ ಹೊಸಕೇರಿ, ಮುಂತಾದವರು ಮಾತನಾಡಿದರು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಹುಬ್ಬಳ್ಳಿ ನಗರದ ಅಧ್ಯಕ್ಷರಾದ ಕಿರಣ ಶೆಟ್ಟರ್ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದ ಆರಂಭದಲ್ಲಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಸದಸ್ಯ ಎಲ್ ಐ ಲಕ್ಕಮ್ಮನವರ ಪ್ರಾಸ್ತಾವಿಕವಾಗಿ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ, ಕತೆ ಕಟ್ಟೋಣ, ನಾಟಕ ಆಡೋಣ, ಕವನ ಬರೆಯೋಣ, ನಾನು ರಿಪೋರ್ಟರ, ನಿಧಿ ಶೋಧ, ಸೃಜನಶೀಲ ಕಲೆ, ಚಿತ್ರಕಲೆ ಮುಂತಾದ ವಿಶಿಷ್ಟ ಕಲೆಗಳನ್ನು ಮಕ್ಕಳಿಗೆ ರೂಡಿಸಲಾಗುವುದು ಎಂದರು.
ಕಲ್ಕಿ ಎಜುಕೇಶನ್ ಅಂಡ್ ಡೆವಲಪ್ಮೆಂಟ್ ಸೊಸೈಟಿಯ ಸದಸ್ಯರು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ಹುಬ್ಬಳ್ಳಿ ನಗರ ಘಟಕ ಅಧ್ಯಕ್ಷರಾದ ಶ್ರೀ ಕಿರಣ್ ಶೆಟ್ಟರ್ ಗೌರವಾಧ್ಯಕ್ಷರಾದ ರೇಖಾ ಮೊರಬ್. ಕಾರ್ಯದರ್ಶಿಯಾದ ನೀಲಾಂಬಿಕ ಶೆಟ್ಟರ್ ಕೋಶ್ಯಾಧ್ಯಕ್ಷರಾದ ಶ್ವೇತಾ ಶಲವಡಿ ಹಾಗೂ ಲಲಿತಾ ಶಲವಡಿ, ನಿಂಗಪ್ಪ ಶಲವಡಿ, ಸಂತೋಷ ಶಲವಡಿ, ಮಂಜುಳಾ ಬೆಣ್ಣಿ , ಪ್ರೇಮ ಪೂಜಾರ್, ಅನುಪಮಾ ಹಂಸಬಾವಿ, ರಾಜೇಶ್ವರಿ ಪವಾಡಿ ಉಪಸ್ಥಿತರಿದ್ದರು
ಭಾರತ ಜ್ಞಾನ ವಿಜ್ಞಾನ ಸಮಿತಿಯ ಹುಬ್ಬಳ್ಳಿ ನಗರದ ಪ್ರದಾನ ಕಾರ್ಯದರ್ಶಿ ನೀಲಾಂಬಿಕಾ ಶೆಟ್ಟರ್ ಸ್ವಾಗತಿಸಿ ನಿರೂಪಿಸಿದರು, ಶ್ವೇತಾ ಶೆಲವಡಿ ವಂದಿಸಿದರು.