ಯುಗಾದಿ ಹಬ್ಬ
ವರುಷದ ಮೊದಲ ಹಬ್ಬ
ಬಂದೇ ಬಿಟ್ಟಿತು ಯುಗಾದಿ ಹಬ್ಬ
ಮತ್ತದೇ ಶುಭಾಶಯಗಳ ವಿನಿಮಯ
ಸಂಭ್ರಮಿಸಲೂ ಇಲ್ಲ ಸಮಯ ||
ಶುಭಾಶಯಗಳ ಸುರಿಮಳೆ
ಸಾಮಾಜಿಕ ಜಾಲ ತಾಣದಲಿ
ಎಲ್ಲವೂ ಇಂದು ಖಾಲಿ ಖಾಲಿ
ಮನೆ ಮನಗಳ ಅಂಗಳದಲಿ ||
ತಳಿರು ತೋರಣ ಬೇವುಬೆಲ್ಲ
ವಿರಳದಲಿ ಅತೀ ವಿರಳವೆಲ್ಲ
ಅಲ್ಲೋ ಇಲ್ಲೋ ಹಿರಿತಲೆ
ಇರುವೆಡೆ ಉಳಿದಿವೆ ಎಲ್ಲ ||
ಎತ್ತ ಸಾಗಿದೆ ನಮ್ಮೀ ಬದುಕು
ಅರ್ಥವಿಲ್ಲದ ಜಂಜಾಟಗಳಲ್ಲಿ
ಕೂಡಿ ಆಡಿ ನಲಿದು ನೆಗೆದು
ಹರ್ಷಿಸಲು ಆಗದು ನೋಡಿಲ್ಲಿ ||
ಏನಾದರಾಗಲಿ ಹಿರಿಯರ
ದಾರಿಯಲಿ ಮುನ್ನಡೆಯೋಣ
ಸಂಪ್ರದಾಯ ಹಬ್ಬಹರಿದಿನಗಳ ತಕ್ಕಮಟ್ಟಿಗಾದರೂ ಆಚರಿಸೋಣ ||
ಈ ಯುಗಾದಿ ಹಬ್ಬ ತರಲಿ
ಎಲ್ಲರಲಿ ನವೋತ್ಸಾಹವನು
ಸಕಲರ ಕಷ್ಟ ದೂರಾಗುತಲಿ
ತುಂಬಲಿ ಹರ್ಷದ ಹೊನಲನು ||
ಜ್ಯೋತಿ. ಕೋಟಗಿ (ಬೈಲಹೊಂಗಲ)
ಬಿ .ಆರ್. ಪಿ. ಚ. ಕಿತ್ತೂರು