ಒಂದೇ ಜಿಲ್ಲೆಯ ನಾಲ್ಕು ಜನ ಶಿಕ್ಷಕರು ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ…
ಕರ್ತವ್ಯ ಪಾಲನೆ ಮಾಡದೆ ಇರುವ ನಾಲ್ಕು ಜನ ಶಿಕ್ಷಕರ ಮಾಹಿತಿ ಇಲ್ಲಿದೆ ನೋಡಿ..
ಚಿತ್ರದುರ್ಗ, ಮಾರ್ಚ್.30 : 2023-24ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ನಕಲು ಮಾಡಲು ಸಹಕರಿಸಿದ ನಾಲ್ವರು ಶಿಕ್ಷಕರ ಅಮಾನತು ಮಾಡಿ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಆದೇಶಿಸಿದ್ದಾರೆ
ಚಳ್ಳಕೆರೆ ತಾಲೂಕಿನ
1 ) ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇವಣ್ಣ,
2 ) ಗೋಸಿಕೆರೆಯ ರಾಧಾಕೃಷ್ಣ ಗ್ರಾಮಾಂತರ ಪ್ರೌಢಶಾಲೆಯ ಸಹ ಶಿಕ್ಷಕ ರಾಘವೇಂದ್ರ
3 ) ಪಿ. ಓಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಶೇಖರ ಮತ್ತು
4) ಕೊರ್ಲಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಕಾಶ್ ಅವರು ಅಮಾನತುಗೊಂಡ ಶಿಕ್ಷಕರು.
ಇಂದು (ಶನಿವಾರ) ಪರುಶುರಾಮಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದು, ಇವರೆಲ್ಲರೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದು, ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ವಿಧ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸುತ್ತಿರುವುದು ಕಂಡು ಬಂದಿದೆ. ಹಾಗೂ ನಕಲು ಮಾಡುವುದನ್ನು ತಡೆಯದೇ ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೆ, ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಹ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.